ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತರಿಗೇಕಿಲ್ಲ ಭಾರತ ರತ್ನ, ಶಿವಕುಮಾರ ಶ್ರೀಗಳನ್ನು ಪರಿಗಣಿಸಿ: ಬಾಬಾ ರಾಮ್‌ದೇವ್‌

Last Updated 27 ಜನವರಿ 2019, 6:11 IST
ಅಕ್ಷರ ಗಾತ್ರ

ನವದೆಹಲಿ:70 ವರ್ಷ ಕಳೆದರೂ ಶಿವಕುಮಾರ ಸ್ವಾಮೀಜಿ ಸೇರಿದಂತೆಯಾವೊಬ್ಬ ಸಂತ/ಸನ್ಯಾಸಿಗೂ ದೇಶದ ಅತ್ಯುನ್ನತ ಗೌರವ ಭಾರತ ರತ್ನ ನೀಡದಿರುವುದು ದೌರ್ಭಾಗ್ಯದ ಸಂಗತಿ ಎಂದು ಯೋಗ ಗುರು ಬಾಬಾ ರಾಮ್‌ದೇವ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಸನ್ಯಾಸಿಗಳಿಗೆ(ಋಷಿ) ಭಾರತ ರತ್ನ ನೀಡಬೇಕು ಎಂದು ಒತ್ತಾಯಿಸಿರುವ ರಾಮ್‌ದೇವ್, 70 ವರ್ಷದಲ್ಲಿ ಈ ಪುರಸ್ಕಾರಕ್ಕೆ ಒಬ್ಬ ಸಂತರನ್ನೂ ಆಯ್ಕೆ ಮಾಡದಿರುವುದು ದುರಷೃಷ್ಟಕರ ಎಂದು ಹೇಳಿದ್ದಾರೆ.

ಭಾರತ ರತ್ನಕ್ಕೆ 70 ವರ್ಷಗಳಲ್ಲಿ ಯಾವುದೇ ಸಂತರನ್ನು ಆಯ್ಕೆ ಮಾಡಿಲ್ಲ. ಅದು ಮಹರ್ಷಿ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದರು ಮತ್ತುಈಚೆಗೆ ಲಿಂಗೈಕ್ಯರಾದ ಶಿವಕುಮಾರ ಸ್ವಾಮೀಜಿ ಅವರನ್ನೂ ಆಯ್ಕೆ ಮಾಡದಿರುವುದು ದುರದೃಷ್ಟಕರ. ಪ್ರತಿಷ್ಠಿತ ಪ್ರಶಸ್ತಿಗೆ ಮುಂದಿನ ವರ್ಷವಾದರೂ ಸಂತ ಸಮುದಾಯದಿಂದ ಯಾರನ್ನಾದರೂ ಸರ್ಕಾರ ಪರಿಗಣಿಸಬೇಕು ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ನಿಧನರಾದಾಗ ಬಾಬಾ ರಾಮ್‌ದೇವ್‌ ಅವರು ಶ್ರೀಗಳ ಅಂತಿಮ ದರ್ಶನ ಪಡೆದ ವೇಳೆ ಲಿಂಗಾಯತ ಸಮಾಜದ ಶ್ರೀಗಳಿಗೆ ಭಾರತ ರತ್ನ ನೀಡಿಲ್ಲ ಎಂಬ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು.

ಪ್ರಸಕ್ತ ವರ್ಷದ ಭಾರತ ರತ್ನವನ್ನು ಕೇಂದ್ರ ಸರ್ಕಾರ ಪ್ರಕಟಿಸಿದ ಬಳಿಕ, ಶ್ರೀಗಳಿಗೆ ಗೌರವ ಪುರಸ್ಕಾರ ನೀಡದಿರುವುದಕ್ಕೆ ಸಾರ್ವಜನಿಕವಾಗಿ ಹಾಗೂ ಕಾಂಗ್ರೆಸ್‌ ಮುಖಂಡರು ಸರ್ಕಾರದ ವಿರುದ್ಧ ವ್ಯಾಪಕವಾಗಿ ಟೀಕೆ ಮಾಡಿದ್ದಾರೆ.

ಸಿದ್ಧಗಂಗಾ ಶ್ರೀಗಳು ಅವಿತರ ತ್ರಿವಿಧ ದಾಸೋಹ ನಡೆಸಿ, 111 ವರ್ಷಕಾಲ ಜೀವಿತಾವಧಿಯಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಶ್ರೀಗಳ ಸೇವೆಗೆ ಜನರೇ ’ನಡೆದಾಡುವ ದೇವರು‘ ಎಂದು ಕರೆದಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT