ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1,987 ಕೋಟಿ ವೆಚ್ಚಕ್ಕೆ ಅನುಮೋದನೆ

ಬಿಕ್ಕಟ್ಟಿನ ನಡುವೆಯೂ ವಿವಿಧ ಕಾಮಗಾರಿಗಳಿಗೆ ಸಂಪುಟ ಒಪ್ಪಿಗೆ
Last Updated 11 ಜುಲೈ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಮೈತ್ರಿ’ ಸರ್ಕಾರ ಗಂಭೀರ ಬಿಕ್ಕಟ್ಟಿನ ಸನ್ನಿವೇಶ ಎದುರಿಸುತ್ತಿದ್ದರೂ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ₹ 1,987 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.

ಇದರಲ್ಲಿ ಸಾಕಷ್ಟು ಯೋಜನೆಗಳು ಮೈತ್ರಿಯಲ್ಲಿ ಉಳಿದಿರುವ ಕೆಲವು ಶಾಸಕರನ್ನು ತಣಿಸುವ ಉದ್ದೇಶದ್ದಾಗಿವೆ.

ಪ್ರಮುಖ ನಿರ್ಧಾರಗಳು: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣಕ್ಕೆ ತುರವಿಹಳ್ಳ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆ ಮೂಲದಿಂದ ನೀರು ಸರಬರಾಜು ಯೋಜನೆಗೆ ₹ 88.16 ಕೋಟಿ.

* ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿರುವ ಕಲ್ಯಾಣಿಗಳ ಪುನಶ್ಚೇತನ ಯೋಜನೆಗೆ ₹32 ಕೋಟಿ.
* ರಾಮನಗರ ಸಮೀಪ ಕಾಳೇಗೌಡನದೊಡ್ಡಿ ಬಳಿ ಅರ್ಕಾವತಿ ನದಿಯಿಂದ ನೀರು ಎತ್ತಿ ವಿವಿಧ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ ₹ 28 ಕೋಟಿ.
* ರಾಮನಗರ ತಾಲ್ಲೂಕು ಬೈರಮಂಗಲ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ಅಭಿವೃದ್ಧಿಗಾಗಿ ₹106 ಕೋಟಿ ಅಂದಾಜು ವೆಚ್ಚದ ಕಾಮಗಾರಿ.
* ಮಂಡ್ಯ ಜಿಲ್ಲೆ ಲೋಕಪಾವನಿ ನದಿಯಿಂದ ಸುಂಕಾತೊಣ್ಣೂರು ಮತ್ತು ಇತರ ಕೆರೆಗಳನ್ನು ತುಂಬಿಸುವ ಯೋಜನೆಗೆ ₹ 30 ಕೋಟಿ.
* ಹಾಸನದ ಸೋಮನಹಳ್ಳಿ ಮತ್ತು ವಿಜಯಪುರ ಜಿಲ್ಲೆಯ ಅಲಮೇಲದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಸ್ಥಾಪನೆ.
* ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬೇಡಿಕೆ ಹಿನ್ನೆಲೆಯಲ್ಲಿ ಆಯೋಗ ರಚಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ.
* ಹನಿ ನೀರಾವರಿ ಘಟಕಗಳ ಅಳವಡಿಕೆಗಾಗಿ ನಬಾರ್ಡ್ ನಿಂದ ₹ 20 ಕೋಟಿ ನೆರವು ಪಡೆಯುವ ಯೋಜನೆ.
* ನವ ಬೆಂಗಳೂರು ಯೋಜನೆಯಡಿಬಿಬಿಎಂಪಿಗೆ ಈಗಾಗಲೇ ಅನುಮೋದನೆಗೊಂಡಿರುವ ಕ್ರಿಯಾ ಯೋಜನೆಯಂತೆ ವೈಟ್‌ ಟಾಪಿಂಗ್‌ ಮಾಡಲು, ₹562 ಕೋಟಿಯ ಮೂರು ಪ್ಯಾಕೇಜ್‌ಗಳಿಗೆ ಒಪ್ಪಿಗೆ.
* ಕೃಷ್ಣಾ ಮೇಲ್ದಂಡೆ ಯೋಜನೆಯ 2 ನೇ ಹಂತದ ನಾರಾಯಣಪುರ ಬಲದಂಡೆ ಕಾಲುವೆ 0 ಕಿ.ಮೀನಿಂದ 95 ನೇ ಕಿ.ಮೀವರೆಗೆ ಕಾಲುವೆ ಜಾಲ ಆಧುನೀಕರಿಸುವ ಕಾಮಗಾರಿಗೆ ₹ 750 ಕೋಟಿ. ಮೊದಲ ಹಂತದಲ್ಲಿ ₹ 375 ಕೋಟಿ ಕಾಮಗಾರಿಗೆ ಸಮ್ಮತಿ.
* ಸಿರಿಧಾನ್ಯ ಬೆಳೆಯುವ ರೈತರಿಗೆ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ, ಪ್ರತಿ ಹೆಕ್ಟೇರ್‌ಗೆ ತಲಾ ₹10 ಸಾವಿರ ಪ್ರೋತ್ಸಾಹ ಧನ.
* ಹಾಸನ ಜಿಲ್ಲೆ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೂರನೇ ಹಂತದ ದೂತನೂರು ಕಾವಲ್‌ ಗ್ರಾಮದ ಬಳಿ ದಂಡಿಗನ ಹಳ್ಳಿ ಶಾಖಾ ನಾಲೆಯಿಂದ 2.67 ಟಿಎಂಸಿ ಅಡಿ ನೀರನ್ನು ಎತ್ತಿ ನೀರಾವರಿ ಕಲ್ಪಿಸುವ ₹141.50 ಕೋಟಿ ಯೋಜನೆಗೆ ಒಪ್ಪಿಗೆ.
* ಎಚ್‌.ಸಿ.ವ್ಯಾಲಿ ಯೋಜನೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೆಪಲ್ಲಿ ತಾಲ್ಲೂಕಿನ 24 ಕೆರೆಗಳಿಗೆ ತ್ಯಾಜ್ಯ ಸಂಸ್ಕರಿಸಿದ ನೀರು ತುಂಬಿಸುವ ಯೋಜನೆಗೆ ₹70 ಕೋಟಿ.
* ಹೆಸರಘಟ್ಟ ಕೆರೆ ಸುತ್ತಮುತ್ತ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ಮತ್ತು ತ್ಯಾಜ್ಯ ಸಂಸ್ಕರಿಸುವ ಘಟಕ ಸ್ಥಾಪನೆಗೆ ₹37.28 ಕೋಟಿ.
* ತಿರುಮಲದಲ್ಲಿ ಅತಿಥಿಗೃಹ ನಿರ್ಮಾಣಕ್ಕೆ₹ 26 ಕೋಟಿ.
* ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ₹95 ಕೋಟಿ.
* ಬೆಂಗಳೂರು ಉತ್ತರ ತಾಲ್ಲೂಕಿನ ಗಾಣಿಗರ ಹಳ್ಳಿ ಕೆರೆಯ ಆಧುನಿಕ ಕಾಮಗಾರಿಗೆ ₹13 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT