ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ ನಿಲುವು ಕಾದು ನೋಡುತ್ತೇವೆ: ಅಮೆರಿಕ

Last Updated 26 ಫೆಬ್ರುವರಿ 2018, 19:11 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಎಪಿ): ಅಮೆರಿಕದ ಜತೆ ಸಂಧಾನಕ್ಕೆ ಆಸಕ್ತಿ ತೋರಿರುವ ಉತ್ತರ ಕೊರಿಯಾ, ನಿಶ್ಯಸ್ತ್ರೀಕರಣದ ಬಗ್ಗೆ ಯಾವ ನಿಲುವು ತಳೆಯಲಿದೆ ಎಂಬುದನ್ನು ಕಾದು ನೋಡುವೆವು ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ತಿಳಿಸಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಬಂದಿದ್ದ ಅಮೆರಿಕ ನಿಯೋಗದ ಸದಸ್ಯೆ ಸ್ಯಾಂಡರ್ಸ್, ಉತ್ತರ ಕೊರಿಯಾ ನಡೆ ಕುರಿತು ಮಾತನಾಡಿದ್ದಾರೆ. ನಿಯೋಗದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಸಹ ಇದ್ದಾರೆ.

‘ಉತ್ತರ ಕೊರಿಯಾ ಸಂಪೂರ್ಣ, ಸ್ವೀಕಾರಾರ್ಹ ಮತ್ತು ಮಾರ್ಪಡಿಸಲು ಆಗದ ಪರಮಾಣು ನಿಶ್ಯಸ್ತ್ರೀಕರಣಕ್ಕೆ ಒಪ್ಪಲಿ ಎಂಬುದರ ಬಗ್ಗೆ ಡೊನಾಲ್ಡ್ ಟ್ರಂಪ್ ಈಗಲೂ ಬದ್ಧರಾಗಿದ್ದಾರೆ. ತನ್ನಲ್ಲಿರುವ ಅಣ್ವಸ್ತ್ರ ನಾಶಗೊಳಿಸಿ, ಕ್ಷಿಪಣಿ ಪರೀಕ್ಷೆಗಳನ್ನು ನಿಲ್ಲಿಸುವವರೆಗೂ ಅಮೆರಿಕದ ಗರಿಷ್ಠ ಒತ್ತಡ ಹೇರಿಕೆ ಕ್ರಮ ಮುಂದುವರಿಯಲಿದೆ’ ಎಂದು ಸ್ಯಾಂಡರ್ಸ್ ತಿಳಿಸಿದ್ದಾರೆ.

ಉತ್ತರ ಕೊರಿಯಾ ಮಾತುಕತೆಗೆ ಮುಂದಾಗಿರುವುದು ನಿಶ್ಯಸ್ತ್ರೀಕರಣದೆಡೆಗಿನ ಮೊದಲ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮೊದಲು ಉತ್ತರ ಕೊರಿಯಾದ ಪ್ರತಿನಿಧಿಯೊಬ್ಬರು ಅಮೆರಿಕದ ಜತೆ ಮಾತುಕತೆ ನಡೆಸಲು ಸಿದ್ಧ ಎಂದು ನನ್ನ ಬಳಿ ತಿಳಿಸಿದ್ದಾರೆ ಎಂಬುದನ್ನು ದಕ್ಷಿಣ ಕೊರಿಯಾದ ಪ್ರಧಾನಿ ಮೂನ್ ಜೇ–ಇನ್ ಘೋಷಿಸಿದ್ದರು.

ಹಲವು ವರ್ಷಗಳಿಂದ ಅಮೆರಿಕ ಮತ್ತು ಉತ್ತರ ಕೊರಿಯಾ ಮಧ್ಯೆ ರಾಜತಾಂತ್ರಿಕ ಮಾತುಕತೆ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT