ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌ ದರ್ಶನ ಪಡೆಯಲು ಹರಿದುಬರುತ್ತಲೇ ಇದೆ ಜನಸಾಗರ

Last Updated 25 ನವೆಂಬರ್ 2018, 6:44 IST
ಅಕ್ಷರ ಗಾತ್ರ

ಬೆಂಗಳೂರು: 'ಮಕ ಕಾಣ್ವಂಗೆ ಮಡ್ಗಿದಾರಾ ನೋಡ್ಬುಡ್ತೀನಿ ಫಸ್ಟು... ಅಂಗೇನಾರ ಮಡ್ಗಿಲ್ಲಾ ಅಂದ್ರೆ ಮಂಡ್ಯಕ್ಕೆ ಕರ್ಕೊಂಡೋಗ್ಬಿಡ್ತೀನಿ..'
–ಇದು ಅಂಬರೀಷ್ ಅಭಿಮಾನಿಯೊಬ್ಬ ಪಾರ್ಥೀವ ಶರೀರ ದರ್ಶನದ ಸರತಿಯಲ್ಲಿ ನಿಂತು ಆಡಿದ ಮಾತು.

ಬೆಳಗಿನಿಂದಲೂ ಅಂಬರೀಷ್‌ಅಂತಿಮದರ್ಶನ ಪಡೆಯಲು ಬರುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಅವುಗಳಲ್ಲಿ ಪುಟ್ಟ ಮಕ್ಕಳು, ವೃದ್ಧರು, ಹೆಂಗಸರು ಎಲ್ಲವರೂ ಇದ್ದಾರೆ. ಕ್ಷಣಕ್ಕೊಮ್ಮೆ 'ಅಂಬರೀಶಣ್ಣನಿಗೇ ಜಯವಾಗಲಿ... ಮಂಡ್ಯದ ಗಂಡಿಗೆ ಜಯವಾಗಲಿ ಎಂಬ ಘೋಷಗಳು ಮೊಳಗುತ್ತಲೇ ಇವೆ.

ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಪಾರ್ಥೀವ ಶರೀರದ ಫೋಟೊ ತೆಗೆಯಲು ಯತ್ನಿಸುತ್ತಿರುವ ಅಭಿಮಾನಿಗಳನ್ನು ಸಾಗಹಾಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಮುಗಿಲು ಮುಟ್ಟುವ ಜಯಕಾರದ ಜತೆಗೇ ಮೃತದೇಹ ಕಂಡು 'ಅಣ್ಣಾ... ನಮ್ಮನ್ನು ಬಿಟ್ಬುಟ್ಟು ಹೋಗ್ಬಿಟ್ಯಲ್ಲಾ... ಅಣ್ಣಾ...' ಎಂಬ ರೋದನವೂ ಕೇಳಿಸುತ್ತಿದೆ. 'ಕುಮಾರಣ್ಣಾ, ನಮ್ ಮಂಡ್ಯಕ್ಕೆ ಅಂಬರೀಶಣ್ಣನ ಕರ್ಕಬರಲೇಬೇಕು... ಇಲ್ಲಾಂದ್ರೆ ಸುಮ್ನಿರಾಕಿಲ್ಲ' ಎಂದು ಅಂಬಿ ಅಭಿಮಾನಿ ಎಂದು ಬರೆದುಕೊಂಡಿದ್ದ ಟಿ ಷರ್ಟ್ ತೊಟ್ಟ ಹುಡುಗ, ಮುಖ್ಯಮಂತ್ರಿಯತ್ತ ಕೈತೋರಿಸಿ ಕಿರುಚುತ್ತಿದ್ದ.

ವಿಐಪಿಗಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸಿರುವ ಕುರಿತೂ ಆಕ್ರೋಶ ವ್ಯಕ್ತವಾಯಿತು.. 'ಅವ್ರು ಮಾತ್ರ ಆರಾಮಾಗಿ ನಿಂತ್ಕಂಡು ನೋಡ್ತವ್ರೆ. ನಮ್ಮನ್ನು ಇಲ್ಲಿ ಸರಿಯಾಗಿ ನೋಡಕೂ ಬಿಡದಂಗೆ ತಳ್ತಾರೆ ಪೊಲೀಸ್ರು' ಎಂದು ಹಲವು ಅಭಿಮಾನಿಗಳು ನೋವಿನಿಂದ ಹೇಳಿಕೊಂಡರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT