ಚರ್ಚ್ ಮೇಲೆ ದಾಳಿ: ಪ್ರತಿಮೆಗೆ ಹಾನಿ

7

ಚರ್ಚ್ ಮೇಲೆ ದಾಳಿ: ಪ್ರತಿಮೆಗೆ ಹಾನಿ

Published:
Updated:
Deccan Herald

ಬೇಲೂರು: ತಾಲ್ಲೂಕಿನ ತೊಳಲು ಸಮೀಪದ ಮತ್ತಿಹಳ್ಳಿಯಲ್ಲಿರುವ ಸೇಕ್ರೆಡ್‌ಹಾರ್ಟ್‌ ಚರ್ಚ್‌ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆದಿದೆ. ಚರ್ಚ್‌ ಮುಂಭಾಗದಲ್ಲಿ ಇದ್ದ ಮೇರಿಯಮ್ಮ ಪ್ರತಿಮೆಯ ಕವಚದ ಗಾಜುಗಳನ್ನು ಒಡೆದು ಹಾಕಿ, ಪ್ರತಿಮೆಯನ್ನು ಹಾನಿಗೊಳಿಸಲಾಗಿದೆ.

ಈ ಚರ್ಚ್‌ ರಾಷ್ಟ್ರೀಯ ಹೆದ್ದಾರಿ 234ರ ಬದಿಯಲ್ಲಿದ್ದು, ಮೇರಿಯಮ್ಮ ಪ್ರತಿಮೆಯನ್ನು ಹೊರತೆಗೆದು ಹಾನಿಗೊಳಿಸಿ ಸಮೀಪದಲ್ಲೇ ಎಸೆದು ಹೋಗಿದ್ದಾರೆ. ಫಾದರ್‌ ಜೋಸೆಫ್‌ ಪಿಂಟೋ ಬೆಳಿಗ್ಗೆ ಚರ್ಚ್‌ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

‘ಚರ್ಚ್‌ನಲ್ಲಿ ರಾತ್ರಿ ವೇಳೆ ಯಾರೂ ಮಲಗುವುದಿಲ್ಲ. ಇದನ್ನು ತಿಳಿದ ಕಿಡಿಗೇಡಿಗಳು ಗಾಜು ಒಡೆದು ಹಾಕಿ, ಪ್ರತಿಮೆ ಹಾನಿಗೊಳಿಸಿದ್ದಾರೆ’ ಎಂದು ಚರ್ಚ್‌ ಸದಸ್ಯ ಜೋಸೆಫ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !