ಹೆಣ್ಣು ಹುಟ್ಟಿತೆಂದು ಹಸುಗೂಸು ಕೊಂದ ತಂದೆ

7
ಬಾಣಸವಾಡಿ ಪೊಲೀಸರಿಂದ ಆರೋಪಿ ಬಂಧನ

ಹೆಣ್ಣು ಹುಟ್ಟಿತೆಂದು ಹಸುಗೂಸು ಕೊಂದ ತಂದೆ

Published:
Updated:
Deccan Herald

ಬೆಂಗಳೂರು: ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಪತ್ನಿಯ ಜೊತೆ ಜಗಳ ತೆಗೆದಿದ್ದ ಗೋಕುಲ್ (21) ಎಂಬಾತ, ತನ್ನ 20 ದಿನಗಳ ಹಸುಗೂಸನ್ನೇ ಕೊಂದಿರುವ ಹೃದಯ ವಿದ್ರಾವಕ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.

ಆ ಸಂಬಂಧ ಮಗುವಿನ ತಾಯಿ ಬುಲೆ, ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಗೋಕುಲ್‌ನನ್ನು ಬಂಧಿಸಿರುವ  ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

ನೇಪಾಳದ ಗೋಕುಲ್, 20 ವರ್ಷದ ಬುಲೆ ಅವರನ್ನು ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ದಂಪತಿ, ಉದ್ಯೋಗ ಅರಸಿ ನಗರಕ್ಕೆ ಬಂದಿದ್ದರು. ಬಾಣಸವಾಡಿ ಸಮೀಪದ ಸುಬ್ಬನಪಾಳ್ಯ ಬಳಿಯ ಮುನಿಸ್ವಾಮಪ್ಪ ಬಡಾವಣೆಯಲ್ಲಿ ವಾಸವಿದ್ದರು ಎಂದು ಪೊಲೀಸರು ಹೇಳಿದರು. 

ಸ್ಥಳೀಯ ಈಜುಕೊಳದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಆರೋಪಿ, ಪತ್ನಿಯ ಜೊತೆ ನಿತ್ಯವೂ ಜಗಳ ಮಾಡುತ್ತಿದ್ದ. ಹೆಣ್ಣು ಹುಟ್ಟಿದ ಬಳಿಕವಂತೂ ಪತ್ನಿಗೆ ವಿಪರೀತ ಕಿರುಕುಳ ನೀಡಲಾರಂಭಿಸಿದ್ದ ಎಂದರು.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಪತ್ನಿ ಜೊತೆ ಜಗಳ ತೆಗೆದಿದ್ದ ಆರೋಪಿ, ಹಾಸಿಗೆಯಲ್ಲಿದ್ದ ಮಗುವಿಗೆ ಕೈಯಿಂದ ಹೊಡೆದಿದ್ದ. ರಕ್ಷಿಸಲು ಬಂದ ಪತ್ನಿಯನ್ನು ತಳ್ಳಿದ್ದ. ನಂತರ, ಮಗುವನ್ನು ಎತ್ತಿಕೊಂಡು ಮನೆಯ ಗೋಡೆಗೆ ಎಸೆದಿದ್ದ. ಅದರಿಂದಾಗಿ ಮಗು, ಸ್ಥಳದಲ್ಲೇ ಮೃತಪಟ್ಟಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !