ಶನಿವಾರ, ನವೆಂಬರ್ 16, 2019
22 °C
ಮುಖ್ಯಮಂತ್ರಿ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಟ್ವೀಟ್‌ ಸಮರ

‘ಬಡವರ ಬಂಧು’ಗೆ ಚೈತನ್ಯ ತುಂಬಿ, ಇಲ್ಲವೇ ಹೋರಾಟ ಎದುರಿಸಿ: ಕುಮಾರಸ್ವಾಮಿ

Published:
Updated:

ಬೆಂಗಳೂರು: ‘ಆರ್ಥಿಕವಾಗಿ ಅಶಕ್ತರಾದವರು, ಸಣ್ಣ ವ್ಯಾಪಾರಿಗಳನ್ನು ಲೇವಾದೇವಿಗಾರರ ವಿಷವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಬಡವರ ಬಂಧು ಕಾರ್ಯಕ್ರಮ ತರಲಾಗಿತ್ತು. ಆದರೆ ಈ ಯೋಜನೆಯನ್ನು ಕೊಲ್ಲುವ ಮೂಲಕ ಬಡವರ ವಿರೋಧಿಯಾಗಿದ್ದೀರಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.

‘ಬಡವರಿಂದ ದೂರ ಸಾಗುತ್ತಿರುವ ಬಂಧು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ಪ್ರಕಟವಾದ ವರದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಸರಣಿ ಟ್ವೀಟ್‌ ಮಾಡಿರುವ ಅವರು, ‘ಅಶಕ್ತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಈ ಯೋಜನೆಗೆ ಚೈತನ್ಯ ತುಂಬಿ, ಇಲ್ಲವೇ ಹೋರಾಟ ಎದುರಿಸಿ’ ಎಂದೂ ಎಚ್ಚರಿಸಿದ್ದಾರೆ.

‘ಈ ಯೋಜನೆ ವಿಫಲವಾಗಬಾರದು. ಇದರಲ್ಲಿ ಅಶಕ್ತರನ್ನು ಸಬಲರನ್ನಾಗಿಸಿ ದೇಶದ ಅಭಿವೃದ್ಧಿಯಲ್ಲಿ ಅವರನ್ನೂ ಒಳಗೊಳ್ಳುವಂತೆ ಮಾಡುವ ಪ್ರಮುಖ ಆರ್ಥಿಕ ಚಟುವಟಿಕೆ ಇದಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ‘ಬಡವರ ಬಂಧು’ ಬಲಪಡಿಸಿ ; ಸಣ್ಣ ವ್ಯಾಪಾರಿಗಳಿಗೆ ಶಕ್ತಿ ತುಂಬಿ

ಪ್ರತಿಕ್ರಿಯಿಸಿ (+)