ಮಂಗಳವಾರ, ಜೂಲೈ 7, 2020
27 °C

ಬಂಡೀಪುರ ರಾಷ್ಟ್ರೀಯ ಉದ್ಯಾನ: ವೈಮಾನಿಕ ಸಮೀಕ್ಷೆ ನಡೆಸಿದ ಸತೀಶ್‌ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಸೋಮವಾರ ಬೆಳಿಗ್ಗೆ ಅರಣ್ಯ ಸಚಿವ ಸತೀಶ್‌ ಜಾರಕಿಹೊಳಿ ತಮ್ಮದೇ ಹೆಲಿಕಾಪ್ಟರ್‌ನಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಿಂದ ತಮಿಳುನಾಡಿನ ಮುಧುಮಲೆ ಸಂರಕ್ಷಿತ ಪ್ರದೇಶದವರೆಗೆ ವೈಮಾನಿಕ ಸಮೀಕ್ಷೆ ಕೈಗೊಂಡರು.

ಅತ್ಯಂತ ದೊಡ್ಡ ಕಾಳ್ಗಿಚ್ಚು: ಇತ್ತೀಚಿನ ವರ್ಷಗಳಲ್ಲಿ ಬಂಡೀಪುರದಲ್ಲಿ ಈ ಪ್ರಮಾಣದಲ್ಲಿ ಕಾಳ್ಗಿಚ್ಚು ಸಂಭವಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.

2017ರ ಫೆಬ್ರುವರಿ 18ರಂದು ಆರಂಭವಾದ ಕಾಳ್ಗಿಚ್ಚು ಒಂದು ವಾರ ಕಾಲ ಬಂಡೀಪುರ ವನ್ಯಸಂಪತ್ತು ನಾಶಗೊಳಿಸಿತ್ತು. ಕಲ್ಕೆರೆ, ಹೆಡಿಯಾಲ, ಮಲೆಯೂರು, ಓಂಕಾರ, ಕುಂದುಕೆರೆ, ಗುಂಡ್ರೆ, ಬೇಗೂರು ವಲಯಗಳಲ್ಲಿ ಬೆಂಕಿ ರುದ್ರ ನರ್ತನ ತೋರಿತ್ತು. 10 ಸಾವಿರ ಎಕರೆಗಳಷ್ಟು ಕಾಡು ನಾಶವಾಗಿತ್ತು. ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದ ಗಾರ್ಡ್‌ ಮೃತಪಟ್ಟಿದ್ದರು. 2018ರಲ್ಲಿ ಮುಂಗಾರು ಪೂರ್ವ ಮಳೆ ಫೆಬ್ರುವರಿ ಅಂತ್ಯ, ಮಾರ್ಚ್‌ ಆರಂಭದಲ್ಲೇ ಬಂದಿದ್ದರಿಂದ ಕಾಡಿಗೆ ಬೆಂಕಿ ಬಿದ್ದಿರಲಿಲ್ಲ. ‘ಈ ರೀತಿ ಯಾವತ್ತೂ ಕಾಡು ಬೆಂದು ಹೋಗಿರಲಿಲ್ಲ’ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು