ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲೇ ಬೆಂಗಳೂರಿಗೆ ಪ್ರಥಮ ಸ್ಥಾನ

ಜಾಗತಿಕ ಸಮೃದ್ಧಿ ಸೂಚ್ಯಂಕ: ಜಗತ್ತಿನಲ್ಲಿ 83ನೇ ಸ್ಥಾನ
Last Updated 22 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಲಂಡನ್‌: ಜಾಗತಿಕ ಸಮೃದ್ಧಿ ಸೂಚ್ಯಂಕದಲ್ಲಿ ಭಾರತದ ನಗರಗಳಲ್ಲೇ ಬೆಂಗಳೂರು ಅಗ್ರಸ್ಥಾನ ಪಡೆದಿದೆ.

ಆರ್ಥಿಕತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ ಆಧಾರದ ಮೇಲೆ ಈ ಸೂಚ್ಯಂಕ ನೀಡಲಾಗಿದ್ದು, ಜಗತ್ತಿನ 113 ರಾಷ್ಟ್ರಗಳ ಪಟ್ಟಿಯಲ್ಲಿ ಬೆಂಗಳೂರು ನಗರ 83ನೇ ಸ್ಥಾನ ಪಡೆದಿದೆ.

ಸ್ಪೇನ್‌ನ ಬಿಲ್ಬಾವೊ ನಗರದಲ್ಲಿ ಸೂಚ್ಯಂಕದ ಪಟ್ಟಿ ಬಿಡುಗಡೆ ಮಾಡಲಾಗಿದೆ. 'ಪ್ರಾಸ್ಪರಿಟಿ ಆ್ಯಂಡ್‌ ಇನ್‌ಕ್ಲೂಷನ್‌ ಸಿಟಿ ಸೀಲ್‌ ಆ್ಯಂಡ್‌ ಅವಾರ್ಡ್ಸ್‌’ (ಪಿಐಸಿಎಸ್‌ಎ) ಸೂಚ್ಯಂಕ ಇದಾಗಿದೆ.

ಕೇವಲ ಆರ್ಥಿಕ ಬೆಳವಣಿಗೆ ಆಧಾರದ ಮೇಲೆ ಈ ಸೂಚ್ಯಂಕ ಸಿದ್ಧಪಡಿಸಿಲ್ಲ. ಇದೇ ಪ್ರಥಮ ಬಾರಿ ‘ಒಳಗೊಳ್ಳುವಿಕೆ’ ಅಂಶವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ನಗರಗಳಲ್ಲಿನ ಜನರ ಬದುಕಿನ ಗುಣಮಟ್ಟ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಸಿದ್ಧಪಡಿಸಲಾಗಿದೆ. ವಸತಿ ಸೌಲಭ್ಯ, ಶಿಕ್ಷಣ ಆರೋಗ್ಯ ರಕ್ಷಣೆ ಮಾನದಂಡಗಳನ್ನು ಪರಿಗಣಿಸಲಾಗಿದೆ.

ಸ್ಪೇನ್‌ನ ಬಾಸ್‌ಕ್ಯೂ ಸಂಸ್ಥೆಗಳು ಮತ್ತು ‘ಡಿ ಆ್ಯಂಡ್‌ ಎಲ್‌ ಪಾರ್ಟನರ್‌’ ಸಹಭಾಗಿತ್ವದಲ್ಲಿ ಪಿಐಸಿಎಸ್‌ಎ ಸೂಚ್ಯಂಕ ಕ್ರಮಾಂಕಗಳನ್ನು ಸಿದ್ಧಪಡಿಸಲಾಗಿದೆ.

‘ಕೇವಲ ದೇಶಿ ಆರ್ಥಿಕ ವೃದ್ಧಿ ದರದ (ಜಿಡಿಪಿ) ಆಧಾರದ ಮೇಲೆ ಸೂಚ್ಯಂಕ ಸಿದ್ಧಪಡಿಸಿಲ್ಲ. ಆರ್ಥಿಕತೆಯ ದೃಷ್ಟಿಯಿಂದ ಜನರು ಹೇಗೆ ಬದುಕು ಸಾಗಿಸುತ್ತಿದ್ದಾರೆ. ಆರ್ಥಿಕತೆಗೂ ಯಾವ ರೀತಿ ಕೊಡುಗೆ ನೀಡುತ್ತಿದ್ದಾರೆ ಹಾಗೂ ಅದರ ಲಾಭವನ್ನು ಹೇಗೆ ಪಡೆಯುತ್ತಿದ್ದಾರೆ ಎನ್ನುವ ಮಾನದಂಡಗಳನ್ನು ಪರಿಗಣಿಸಲಾಗಿದೆ’ ಎಂದು ಬಿಸ್ಕೆ ರಿಜನಲ್‌ ಕೌನ್ಸಿಲ್‌ ನಿರ್ದೇಶಕ ಅಸೀರ್‌ ಅಲಿಯಾ ಕ್ಯಾಸ್ಟನೋಸ್‌ ತಿಳಿಸಿದ್ದಾರೆ.

ಸಮೃದ್ಧಿಯ ಅಳತೆ ಮಾಡುವಾಗ ಆರೋಗ್ಯ, ವಸತಿ, ಜೀವನದ ಗುಣಮಟ್ಟ, ಉದ್ಯೋಗ, ಕೌಶಲ, ಆದಾಯವನ್ನು ಪರಿಗಣಿಸಲಾಗಿದೆ ಎಂದುಸ್ಪೇನ್‌ನ ಬಿಸ್ಕೆ ರಿಜನಲ್‌ ಕೌನ್ಸಿಲ್‌ ನಿರ್ದೇಶಕ ಅಸೀರ್‌ ಅಲಿಯಾ ಕ್ಯಾಸ್ಟನೋಸ್‌ ಹೇಳಿದ್ದಾರೆ.

ನಗರ ಸ್ಥಾನ

ಜ್ಯೂರಿಚ್‌ 1,ವಿಯೆನ್ನಾ 2,ಕೋಪನ್‌ಹೆಗನ್‌ 3,ಲಕ್ಸಂಬರ್ಗ್‌ 4,ಹೆಲ್ಸಿಂಕಿ 5,ಒಟ್ಟೊವಾ 8,ವಾಷಿಂಗ್ಟನ್‌ 11,ಸಿಯಾಟಲ್‌ 14,ಬಾಸ್ಟನ್‌ 16,ತೈಪೆ 6,ದೆಹಲಿ 101,ಮುಂಬೈ 107,ಬಿಲ್ಬಾವೊ 20.

ಮಾನದಂಡಗಳು

ಬದುಕಿನ ಗುಣಮಟ್ಟ, ವಸತಿ ಸೌಲಭ್ಯ, ಶಿಕ್ಷಣ,ಆರೋಗ್ಯ ರಕ್ಷಣೆ, ಒಳಗೊಳ್ಳುವಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT