ಭಾನುವಾರ, ಏಪ್ರಿಲ್ 11, 2021
20 °C

ಶಿರಸ್ತೇದಾರ್ ಬ್ಯಾಂಕ್ ಖಾತೆಗೇ ಕನ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಬ್ಯಾಂಕ್ ಅಧಿಕಾರಿಯ ಸೋಗಿ ನಲ್ಲಿ ರಾಣೆಬೆನ್ನೂರು ಕೋರ್ಟ್‌ನ ಶಿರಸ್ತೇದಾರ್‌ಗೆ ಕರೆ ಮಾಡಿದ ಸೈಬರ್ ವಂಚಕನೊಬ್ಬ, ಹೊಸ ಎಟಿಎಂ ಕಾರ್ಡ್ ನೀಡುವುದಾಗಿ ನಂಬಿಸಿ ಅವರ ಖಾತೆಯಿಂದ ಮೂರೇ ನಿಮಿಷದಲ್ಲಿ ₹ 34,999 ಎಗರಿಸಿ ಭರ್ಜರಿ ಶಾಪಿಂಗ್ ಮಾಡಿದ್ದಾನೆ!‌

ಈ ಸಂಬಂಧ ವಂಚನೆಗೆ ಒಳಗಾದ ಶಿರಸ್ತೇದಾರ್ ಎನ್. ಕಲ್ಪನಾ ಅವರು ರಾಣೆಬೆನ್ನೂರು ಠಾಣೆಗೆ ದೂರು ಕೊಟ್ಟಿದ್ದಾರೆ.  ಪ್ರಕರಣ ಇತ್ತೀಚೆಗೆ ಹಾವೇರಿ ಸಿಇಎನ್ ಠಾಣೆಗೆ ವರ್ಗವಾಗಿದೆ. ಪೊಲೀಸರು ವಂಚಕನ ಮೊಬೈಲ್ ಸಂಖ್ಯೆಯ ಸುಳಿವು ಆಧರಿಸಿ ತನಿಖೆ ಪ್ರಾರಂಭಿಸಿದ್ದಾರೆ.‌

‘ಹೊಸ ಎಟಿಎಂ ಕಾರ್ಡ್ ಪಡೆಯಲು ಕಚೇರಿ ಸಹಾಯಕರೊಬ್ಬರ ಮೂಲಕ ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ. ಈ ಬಗ್ಗೆ ತಿಳಿದುಕೊಂಡ ವಂಚಕ, ಮರುದಿನವೇ ನನಗೆ ಮೋಸ ಮಾಡಿದ್ದಾನೆ’ ಎಂದು ಕಲ್ಪನಾ ಹೇಳಿದರು.

‘ನನ್ನ ಬ್ಯಾಂಕ್ ಖಾತೆಗೆ ವೇತನ ಜಮೆ ಆಗಿರುವುದಾಗಿ ಮೊಬೈಲ್‌ಗೆ ಸಂದೇಶಬಂತು. ಅದಾದ ಸ್ವಲ್ಪ ಹೊತ್ತಿನಲ್ಲೇ ಕರೆ ಮಾಡಿದ ವ್ಯಕ್ತಿಯೊಬ್ಬ, ‘ನಾನು ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಮಾತಾಡ್ತಿದ್ದೀನಿ ಎಂದು ಹಳೆ ಕಾರ್ಡ್‌ ವಿವರಗಳನ್ನು ವಿಚಾರಿಸಿದ. ನಂತರ ಹಣ ಪಾವತಿಯಾಗಿರುವ ಸಂದೇಶ ಬಂತು’  ಎಂದು ವಿವರಿಸಿದರು.

ಸೈಬರ್‌ ಕ್ರೈಂನಲ್ಲಿ ಹೆಚ್ಚಳ: ಸೈಬರ್ ಕ್ರೈಂ, ಆರ್ಥಿಕ ಅಪರಾಧ ಹಾಗೂ ಮಾದಕ ವಸ್ತು ಮಾರಾಟ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ 2017ರ ಆಗಸ್ಟ್‌ನಿಂದ ಜಿಲ್ಲೆಗೊಂದು ‘ಸಿಇಎನ್’ ಠಾಣೆಗಳನ್ನು ತೆರೆಯಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.