ಬ್ಯಾಂಕ್‌ನಲ್ಲಿ 12 ಕೆ.ಜಿ ಚಿನ್ನ ಕಳವು

7

ಬ್ಯಾಂಕ್‌ನಲ್ಲಿ 12 ಕೆ.ಜಿ ಚಿನ್ನ ಕಳವು

Published:
Updated:
Deccan Herald

ಹಂಪಾಪುರ (ಮೈಸೂರು): ಎಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿಯ ಕಾವೇರಿ ಗ್ರಾಮೀಣ ಬ್ಯಾಂಕ್‌ ಶಾಖೆಯಲ್ಲಿ 12.5 ಕೆ.ಜಿ ಚಿನ್ನ ಹಾಗೂ ₹ 5 ಲಕ್ಷ ನಗದು ಕಳವು ಮಾಡಲಾಗಿದೆ.

ಕಿಟಕಿ ಸರಳುಗಳನ್ನು ಗ್ಯಾಸ್‌ ಕಟರ್‌ ಮೂಲಕ ತುಂಡರಿಸಿ ಕಳ್ಳರು ಒಳ ನುಗ್ಗಿದ್ದಾರೆ. ಸ್ಟ್ರಾಂಗ್‌ ರೂಂನಲ್ಲಿದ್ದ ಬೀರುವಿನ ಬಾಗಿಲನ್ನು ಗ್ಯಾಸ್‌ ಕಟರ್‌ನಿಂದಲೇ ಮುರಿದು ಕಳವು ಮಾಡಲಾಗಿದೆ. ಕಳವಿಗೂ ಮುನ್ನ ಸೈರನ್‌ಗೆ ಅಳವಡಿಸಿದ್ದ ವೈಯರ್‌ಗಳನ್ನು ತುಂಡರಿಸಲಾಗಿದೆ.

ಘಟನೆ ಶನಿವಾರ ಇಲ್ಲವೇ ಭಾನುವಾರ ರಾತ್ರಿ ನಡೆದಿರುವ ಸಾಧ್ಯತೆ ಇದೆ. ಬ್ಯಾಂಕಿನಲ್ಲಿ ಭದ್ರತಾ ಲೋಪ ಇದೆ. ಸ್ಟ್ರಾಂಗ್‌ ರೂಂ ಬಾಗಿಲಿಗೆ ಲಾಕ್ ಇರಲಿಲ್ಲ. ಸಿ.ಸಿ ಟಿ.ವಿ ಕ್ಯಾಮೆರಾಗಳು ನಿಷ್ಕ್ರಿಯವಾಗಿವೆ. ಶ್ವಾನದಳ, ಬೆರಳಚ್ಚು ತಜ್ಞರು ತಪಾಸಣೆ ನಡೆಸಿದ್ದಾರೆ ಎಂದು ಐಜಿಪಿ ಕೆ.ವಿ.ಶರತ್‌ಚಂದ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !