ಮದ್ಯದಂಗಡಿ: ಮಾಹಿತಿಗೆ ಸೂಚನೆ

ಭಾನುವಾರ, ಮೇ 26, 2019
32 °C

ಮದ್ಯದಂಗಡಿ: ಮಾಹಿತಿಗೆ ಸೂಚನೆ

Published:
Updated:

ಬೆಂಗಳೂರು: ‘ಯಲಹಂಕ ನ್ಯೂ ಟೌನ್ 4ನೇ ಹಂತದ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿಗೆ ಲೈಸನ್ಸ್ ನೀಡಿರುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಿ’ ಎಂದು ಹೈಕೋರ್ಟ್, ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿದೆ.

ಈ ಕುರಿತಂತೆ ಯಲಹಂಕ ನ್ಯೂಟೌನ್ ವಾಸಿಗಳ ಸಂಘ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ಪರವಾನಗಿ ವಿತರಣೆಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಿ ಎಂದು ಸರ್ಕಾರದ ವಕೀಲರಿಗೆ ಸೂಚಿಸಿತು.

ಆಕ್ಷೇಪ ಏನು?: ‘ಅಬಕಾರಿ ನಿಯಮಗಳ ಪ್ರಕಾರ ಸಿಎಲ್-2 ಚಿಲ್ಲರೆ ಮದ್ಯ ಮಾರಾಟದ ಅಂಗಡಿ ಪರವಾನಗಿ ಪಡೆಯಬೇಕಾದರೆ ಸ್ಥಳೀಯ ನಿವಾಸಿಗಳಿಂದ ಯಾವುದೇ ವಿರೋಧ ಇರಬಾರದು. ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರೂ ಪರವಾನಗಿ ನೀಡಿರುವುದು ಆಕ್ಷೇಪಕ್ಕೆ ಕಾರಣ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !