ಸೋಮವಾರ, ನವೆಂಬರ್ 18, 2019
20 °C

ಬಿಬಿಎಂಪಿ ಲಾರಿ ಹರಿದು ಕಾರ್ಮಿಕ ದುರ್ಮರಣ

Published:
Updated:

ಬೆಂಗಳೂರು: ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಸ ಸಾಗಿಸುತ್ತಿದ್ದ ಬಿಬಿಎಂಪಿಯ ಲಾರಿ ಹರಿದು ಕಾರ್ಮಿಕ ವೇಣುಗೋಪಾಲ್ ಎಂಬುವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.

ಬಳ್ಳಾರಿ ರಸ್ತೆಯ ಹೆಬ್ಬಾಳ ಮೇಲ್ಸೇತುವೆಯಲ್ಲಿ ಸೋಮವಾರ ಸಂಜೆ ಈ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

‘ಸ್ಥಳೀಯ ನಿವಾಸಿ ಆಗಿದ್ದ ವೇಣುಗೋಪಾಲ್, ಒಳಾಂಗಣ ಅಲಂಕಾರ ಕಾರ್ಮಿಕರಾಗಿದ್ದರು. ಸ್ನೇಹಿತ ಶಂಕರ್ ಜೊತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಶಂಕರ್ ಅವರೇ ವಾಹನ ಚಲಾಯಿಸುತ್ತಿದ್ದರು’ ಎಂದು ಹೆಬ್ಬಾಳ ಸಂಚಾರ ಪೊಲೀಸರು ಹೇಳಿದರು.

‘ಯಲಹಂಕ ಕಡೆಯಿಂದ ಹೆಬ್ಬಾಳ ಕಡೆ ಬರುತ್ತಿದ್ದ ಲಾರಿ, ದ್ವಿಚಕ್ರ ವಾಹನಕ್ಕೆ ಗುದ್ದಿತ್ತು. ಕೆಳಗೆ ಬಿದ್ದ ವೇಣುಗೋಪಾಲ್ ಮೇಲೆಯೇ ಲಾರಿಯ ಚಕ್ರ ಹರಿದು ಹೋಗಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದರು.

‘ಅತಿವೇಗವಾಗಿ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿದ್ದ ಆರೋಪದಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಲಾರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

 

ಪ್ರತಿಕ್ರಿಯಿಸಿ (+)