ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಧಾಮದಲ್ಲಿ ಕರಡಿ ಸಾವು

Last Updated 6 ಫೆಬ್ರುವರಿ 2019, 19:21 IST
ಅಕ್ಷರ ಗಾತ್ರ

ಸಾತನೂರು (ಕನಕಪುರ): ಆಹಾರ ಮತ್ತು ನೀರಿನ ಕೊರತೆಯಿಂದ ನಿತ್ರಾಣಗೊಂಡಿದ್ದ ಕರಡಿಯೊಂದು ತಾಲ್ಲೂಕಿನ ಸಾತನೂರು ಹೋಬಳಿ ಹೊನ್ನಿಗನಹಳ್ಳಿ ಸಮೀಪದ ಮರೀಗೌಡ ಎಂಬುವರ ಜಮೀನಿನಲ್ಲಿ ಬುಧವಾರ ಮೃತಪಟ್ಟಿದೆ.

ಅದು ಸುಮಾರು 5 ವರ್ಷದ್ದು ಎಂದು ಅಂದಾಜು ಮಾಡಲಾಗಿದೆ. ವನ್ಯಜೀವಿ ಧಾಮದಲ್ಲಿ ನೀರು ಮತ್ತು ಮೇವಿನ ಸಮಸ್ಯೆಯಿಂದ ಬಳಲಿ ಹೊರಗಡೆ ಬಂದಿದೆ. ಬರುವಷ್ಟರಲ್ಲೇ ನಿತ್ರಾಣಗೊಂಡಿದ್ದು ಮೇವು ಸಿಕ್ಕಿದ್ದರೂ ತಿನ್ನಲಾಗಲಿಲ್ಲ. ನೀರು ಸಿಕ್ಕಿದ್ದರೂ ಕುಡಿಯಲಾಗದೆ ಪೊದೆಯಲ್ಲಿ ಮಲಗಿ ಮತ್ತಷ್ಟು ನಿತ್ರಾಣಗೊಂಡು ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸಾತನೂರು ವಲಯ ಅರಣ್ಯಾಧಿಕಾರಿಗಳು ಕರಡಿಯ ಮರಣೋತ್ತರ ಪರೀಕ್ಷೆ ಪಶು ವೈದ್ಯರಿಂದ ಮಾಡಿಸಿದರು. ಬಳಿಕ ಅಂತಿಮ ಸಂಸ್ಕಾರವನ್ನು ಸತ್ತ ಸ್ಥಳದಲ್ಲೇ ಮಾಡಿದ್ದಾಗಿ ಮೂಲಗಳು ತಿಳಿಸಿವೆ.

ಮೇವು ಮತ್ತು ನೀರಿನ ಸಮಸ್ಯೆ: ತಾಲ್ಲೂಕಿನಾದ್ಯಂತ ಇಲ್ಲಿಯವರೆಗೆ ಮೇವು ಮತ್ತು ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ಕಾವೇರಿ ವನ್ಯಜೀವಿ ಧಾಮದಲ್ಲಿ ಮೇವು ಮತ್ತು ನೀರಿನ ಸಮಸ್ಯೆ ತೀವ್ರವಾಗಿರುವುದರಿಂದ ಕಾಡಾನೆಗಳು ಮತ್ತು ಕಾಡು ಪ್ರಾಣಿಗಳು ರೈತರ ಜಮೀನು ಕಡೆ ಬರುತ್ತಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ರಾಜು ತಿಳಿಸಿದ್ದಾರೆ.

ವನ್ಯಜೀವಿ ಧಾಮದಲ್ಲಿ ಕೆಲವು ತಿಂಗಳಿಂದ ನೀರು ಮತ್ತು ಮೇವಿನ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT