ವೈದ್ಯ ಸೀಟು ಕೊಡಿಸುವುದಾಗಿ ₹21.50 ಲಕ್ಷ ವಂಚನೆ

7

ವೈದ್ಯ ಸೀಟು ಕೊಡಿಸುವುದಾಗಿ ₹21.50 ಲಕ್ಷ ವಂಚನೆ

Published:
Updated:

ಬೆಂಗಳೂರು: ನಗರದ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ (ಕಿಮ್ಸ್) ಸೀಟು ಕೊಡಿಸುವುದಾಗಿ ಹೇಳಿ ಕೃಷ್ಣಪಾಲ್ ಎಂಬುವರಿಂದ ₹21.50 ಲಕ್ಷ ಪಡೆದು ವಂಚಿಸಲಾಗಿದೆ.

ಈ ಸಂಬಂಧ ಕೃಷ್ಣಪಾಲ್‌ ಕಬ್ಬನ್ ಪಾರ್ಕ್‌ ಠಾಣೆಗೆ ದೂರು ನೀಡಿದ್ದಾರೆ. ದೆಹಲಿಯ ವಿಷನ್ ಎಂಟರ್‌ಪ್ರೈಸಸ್‌ ಕಂಪನಿಯ ಭೂಪೇಂದ್ರಸಿಂಗ್ ಹಾಗೂ ರಾಹುಲ್ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಹರಿಯಾಣ ನಿವಾಸಿಯಾದ ಕೃಷ್ಣಪಾಲ್ ಅವರ ಮಗ ದ್ವಿತೀಯ ಪಿಯುಸಿ ಮುಗಿಸಿದ್ದಾನೆ. ಆ ವಿಷಯ ತಿಳಿದುಕೊಂಡು ಕೃಷ್ಣಪಾಲ್‌ಗೆ ಕರೆ ಮಾಡಿದ್ದ ಆರೋಪಿ ಭೂಪೇಂದ್ರ ಕುಮಾರ್, ‘ನಿಮ್ಮ ಮಗನಿಗೆ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆ. ಅದಕ್ಕೆ ಆತ ಅರ್ಹನಿದ್ದಾನೆಯೇ ಎಂಬುದನ್ನು ಪರಿಶೀಲಿಸಬೇಕು. ಆತನ ಶೈಕ್ಷಣಿಕ ದಾಖಲೆಗಳನ್ನು ಇ–ಮೇಲ್‌ಗೆ ಕಳುಹಿಸಿ’ ಎಂದಿದ್ದ. ಅದನ್ನು ನಂಬಿದ್ದ ಕೃಷ್ಣಪಾಲ್, ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

‘ಎರಡು ದಿನಗಳ ನಂತರ ಪುನಃ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಮಗ ಸೀಟಿಗೆ ಅರ್ಹನಾಗಿದ್ದಾನೆ. ನಮ್ಮ ವಿಷನ್ ಎಂಟರ್‌ಪ್ರೈಸಸ್‌ ಕಂಪನಿ ಹೆಸರಿಗೆ ₹1.50 ಚೆಕ್‌ ಕಳುಹಿಸಿ’ ಎಂದಿದ್ದರು. ದೂರುದಾರರು ಚೆಕ್‌ ಕಳುಹಿಸುತ್ತಿದ್ದಂತೆ, ಅದನ್ನು ಡ್ರಾ ಮಾಡಿಕೊಳ್ಳಲಾಗಿತ್ತು’

‘ಅದಾದ ನಂತರವೂ ಆರೋಪಿ ಸೀಟು ಕೊಡಿಸಲು ₹20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಎಂ.ಜಿ.ರಸ್ತೆಯ ಬಾರ್ಟನ್ ಸೆಂಟರ್‌ನಲ್ಲಿರುವ ಕಾಫಿ ಡೇಗೆ ಬಂದು ಹಣ ಕೊಡುವಂತೆ ಹೇಳಿದ್ದ. ಆಗಸ್ಟ್‌ 13ರಂದು ಸ್ಥಳಕ್ಕೆ ಬಂದಿದ್ದ ಕೃಷ್ಣಪಾಲ್, ಹಣ ಕೊಟ್ಟಿದ್ದರು. ಅದನ್ನು ತೆಗೆದುಕೊಂಡು ಹೋದ ಆರೋಪಿ ಇದುವರೆಗೂ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಪೊಲೀಸರು ವಿವರಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !