ಸೋಮವಾರ, ಏಪ್ರಿಲ್ 12, 2021
26 °C

ಬಿಜೆಪಿ ರಾಷ್ಟ್ರಪತಿ ಆಳ್ವಿಕೆ ಹೇರಲು ಹುನ್ನಾರ ಮಾಡಿಲ್ಲ: ಸಚಿವ ಪ್ರಹ್ಲಾದ್ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬಿಜೆಪಿ ರಾಷ್ಟ್ರಪತಿ ಆಳ್ವಿಕೆ ಹೇರಲು ಹುನ್ನಾರ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಶನಿವಾರ ಹೇಳಿದರು. 

ಇಲ್ಲಿನ ಸಾರ್ವಜನಿಕ ಆಹವಾಲು ಸ್ವೀಕರಿಸುವ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಪ್ರತಿ ಹಂತದಲ್ಲೂ ಸಂವಿಧಾನ‌ ಉಲ್ಲಂಘಿಸುತ್ತಿದೆ ಆದರೆ ನಾವು ಸಂವಿಧಾನ ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು. 

ವಿಶ್ವಾಸಮತಯಾಚನೆ ಮಾಡ್ತೀನಿ ಅಂತಾ ಕುಮಾರಸ್ವಾಮಿಯವರೇ ತೀರ್ಮಾನ ಮಾಡಿದ್ದರು. ಆದರೆ ಅವರು ಇಲ್ಲಿಯವರೆಗೂ ವಿಶ್ವಾಸಮತಯಾಚನೆ ಮಾಡಿಲ್ಲ, ಸಂವಿಧಾನ ಮತ್ತು ಸಂವಿಧಾನ ಸಂಸ್ಥೆಗಳಿಗೆ ಯಾವುದೇ ಬೆಲೆ ಕೊಡದ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ವಿಶ್ವಾಸಮತಯಾಚನೆಗೆ ಐದು ದಿನ ತೆಗೆದುಕೊಳ್ಳುವ ಇತಿಹಾಸವನ್ನ ಅವರು ಸೃಷ್ಠಿಸಿದ್ದಾರೆ, ನೆಗೆಟಿವ್ ಇತಿಹಾಸ ಸೃಷ್ಠಿ ಮಾಡುವಲ್ಲಿ ಕುಮಾರಸ್ವಾಮಿ ಆ್ಯಂಡ್ ಕಂಪೆನಿ ಎಕ್ಸ್‌ಫರ್ಟ್‌ ಆಗಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಮೈತ್ರಿ ಶಾಸಕರಿಗೆ ದುಡ್ಡು ಕೊಟ್ಟಿದ್ದರೆ, ಆಗಲೇ ದೂರು ಕೊಡಬೇಕಿತ್ತು. ಆದರೆ, ಆ ರೀತಿ ಮಾಡದೆ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದ್ದು ಖಂಡನೀಯ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು