ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಣುಕಾಚಾರ್ಯ ನಮ್ಮ ಸಮಾಜದ ಗುರು: ಸವದಿ ವ್ಯಂಗ್ಯ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವ್ಯಂಗ್ಯ
Last Updated 1 ನವೆಂಬರ್ 2019, 19:27 IST
ಅಕ್ಷರ ಗಾತ್ರ

ಕೊಪ್ಪಳ: ‘ರೇಣುಕಾಚಾರ್ಯ ನಮ್ಮ ಸಮಾಜದ ಗುರು. ಹಿರಿಯ ಶಾಸಕರು. ಅವರು ಏನೇ ಹೇಳಿದರೂ ನಮಗೆ ಆಶೀರ್ವಾದ. ಅವರ ಬಗ್ಗೆ ಗೌರವವಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವ್ಯಂಗ್ಯವಾಗಿ ಹೇಳಿದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ‘ಲಕ್ಷ್ಮಣ ಸವದಿಗೆ ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ..’ ಎಂದು ಮಾಡಿದ್ದ ಟೀಕೆಗೆ ಸವದಿ ಹೀಗೆ ಪ್ರತಿಕ್ರಿಯಿಸಿದರು.

‘ಮಹಾರಾಷ್ಟ್ರದ ಚುನಾವಣೆಯಲ್ಲಿ ನೀವು ಪ್ರಚಾರ ಮಾಡಿದ ಜಿಲ್ಲೆಗಳಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡದ ಕಾರಣ ಡಿಸಿಎಂ ಸ್ಥಾನ ತ್ಯಜಿಸುವಂತೆ ಒತ್ತಡವಿದೆಯೇ’ ಎಂಬ ಪ್ರಶ್ನೆಗೆ, ‘ ಕೊಲ್ಹಾಪುರ, ಸಾಂಗ್ಲಿ, ಪುಣೆ, ಲಾತೂರ ಸೇರಿ ಐದು ಜಿಲ್ಲೆಗಳ ಉಸ್ತುವಾರಿ ನನಗೆ ನೀಡಿದ್ದು, ಅಲ್ಲಿಂದಲೇ ಹೆಚ್ಚು ಶಾಸಕರು ಗೆದ್ದಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT