ಗುರುವಾರ , ಸೆಪ್ಟೆಂಬರ್ 23, 2021
27 °C

ಬೆಳಗಾವಿ: ಬಯಲು ಬಹಿರ್ದೆಸೆಗೆ ತೆರಳಿದ್ದಾಗ ನಾಯಿಗಳ ದಾಳಿ– ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ತಾಲ್ಲೂಕಿನ ಪಂಥಬಾಳೇಕುಂದ್ರಿ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಎರಡೂವರೆ ವರ್ಷದ ಬಾಲಕ ಅಬ್ಬಾಸ್ ಅಲಿ ಯೂಸುಫ್‌ ಸನದಿ (2) ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾನೆ.

‘ಬುಧವಾರ ಸಂಜೆ ಗಾಯಗೊಂಡಿದ್ದ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್‌ಇ ಅಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಮಾರಿಹಾಳ ಠಾಣೆ ಇನ್‌ಸ್ಪೆಕ್ಟರ್‌ ವಿಜಯಕುಮಾರ್‌ ಶಿನ್ನೂರ್‌ ತಿಳಿಸಿದರು.

‘ಮನೆಯ ಬಳಿಯ ರಸ್ತೆಬದಿಯಲ್ಲಿ ಆತನನ್ನು ಬಹಿರ್ದೆಸೆಗೆ ಕೂರಿಸಿದ್ದ ತಾಯಿ ಸಮೀನಾ, ಮುಗಿದ ನಂತರ ಬಾ ಎಂದು ಹೇಳಿ ಮನೆಯಲ್ಲಿ ಪಾತ್ರೆ ತೊಳೆಯಲು ಹೋಗಿದ್ದಾರೆ. ಈ ವೇಳೆ, 2–3 ಬೀದಿನಾಯಿಗಳು ದಾಳಿ ಮಾಡಿವೆ. ಮಗುವಿನ ತಲೆ, ಕತ್ತು, ಕಾಲನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಮಗುವಿನ ಚೀರಾಟ, ನಾಯಿಗಳು ಬೊಗಳುತ್ತಿದ್ದುದ್ದನ್ನು ಕೇಳಿಸಿಕೊಂಡ ಸಮೀನಾ ಓಡಿ ಬಂದಿದ್ದಾರೆ. ಆ ವೇಳೆಗೆ ಸ್ಥಳೀಯರೂ ಬಂದು ನಾಯಿಗಳನ್ನು ಓಡಿಸಿ, ಮಗುವನ್ನು ರಕ್ಷಿಸಿದ್ದರು ಎಂದು ಮಾಹಿತಿ ಬಂದಿದೆ’ ಎಂದು ಪೊಲೀಸರು ತಿಳಿಸಿದರು.

ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು