ಶನಿವಾರ, ಅಕ್ಟೋಬರ್ 19, 2019
28 °C

ಐಆರ್‌ಸಿಟಿಸಿಗೆ ಗೋಲ್ಡನ್‌ ಚಾರಿಯಟ್‌

Published:
Updated:

ಹುಬ್ಬಳ್ಳಿ: ‘ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೋರೇಷನ್‌ಗೆ ‘ಗೋಲ್ಡನ್‌ ಚಾರಿಯಟ್‌’ ರೈಲನ್ನು ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಕೋರಿದ್ದೇನೆ. ಒಪ್ಪಿಗೆ ಸೂಚಿಸಿದ್ದು, ಶೀಘ್ರ ಅದು ಮತ್ತೆ ಸಂಚಾರ ಆರಂಭಿಸಲಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಬುಧವಾರ ಹುಬ್ಬಳ್ಳಿಯಲ್ಲಿ ರೈಲ್ವೆಯ ಬೈಪಾಸ್‌ ಮಾರ್ಗ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಷ್ಟದ ಕಾರಣದಿಂದ ಈಗ ಅದು ಗೋಡೌನ್‌ ಸೇರಿದೆ’ ಎಂದರು.

 

Post Comments (+)