ಆಡಳಿತ ಯಂತ್ರ ದುರುಪಯೋಗ: ರಾಘವೇಂದ್ರ ಆರೋಪ

7

ಆಡಳಿತ ಯಂತ್ರ ದುರುಪಯೋಗ: ರಾಘವೇಂದ್ರ ಆರೋಪ

Published:
Updated:
Deccan Herald

ಶಿವಮೊಗ್ಗ: ಮೈತ್ರಿ ಅಭ್ಯರ್ಥಿ ಗೆಲುವಿಗೆ ಸರ್ಕಾರದ ಆಡಳಿತ ಯಂತ್ರವನ್ನೇ ಬಳಸಿದರೂ ಕ್ಷೇತ್ರದ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ವಿಜೇತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಪ್ರತಿಕ್ರಿಯಿಸಿದರು.

ಚುನಾವಣಾ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್, ಜೆಡಿಎಸ್ ಮುಖಂಡರು ವೈಯಕ್ತಿಕ ಟೀಕೆ, ಆರೋಪ ಮಾಡಿದರೂ ತಲೆ ಕೆಡಿಸಿಕೊಳ್ಳಲಿಲ್ಲ. ಕಡಿಮೆ ಅವಧಿಯಲ್ಲೂ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಸಾಕಷ್ಟು ಶ್ರಮ ಹಾಕಿದ್ದಾರೆ. ಅವರ ಶ್ರಮಕ್ಕೆ ಮತದಾರರು ಪ್ರತಿಫಲ ನೀಡಿದ್ದಾರೆ ಎಂದರು.

ಕೆಲವು ಭಾಗಗಳಲ್ಲಿ ಹೆಚ್ಚಿನ ಮತ ಬರುವ ನಿರೀಕ್ಷೆ ಇತ್ತು. ಅಲ್ಲಿ ಕಡಿಮೆ ಮತಗಳು ಬಂದಿವೆ. ಹಾಗಾಗಿ, ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !