7

ಹಣ ದುರುಪಯೋಗ ತಡೆಗೆ ಕೇಂದ್ರ ಸರ್ಕಾರ ಕ್ರಮ: ಅನಂತಕುಮಾರ ಹೆಗಡೆ

Published:
Updated:

ಶಿರಸಿ: ಭಾರತದಲ್ಲಿ 70 ವರ್ಷಗಳಿಂದ ನಡೆದ ಧರ್ಮಛತ್ರದ ವ್ಯವಹಾರ ಸರಿ ದಾರಿಗೆ ತರದಿದ್ದರೆ ದೇಶ ನೆಟ್ಟಗೆ ನಿಲ್ಲಲು ಸಾಧ್ಯವಿಲ್ಲ. ಇದನ್ನು ಮಾನಗಂಡ ಕೇಂದ್ರ ಸರ್ಕಾರ ಹಂತ ಹಂತವಾಗಿ ತೆರಿಗೆ ವ್ಯವಸ್ಥೆಯಲ್ಲಿ ಬಿಗಿತನ ತರುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಜ್ಞಾನ ಸ್ಟಡಿ ಸರ್ಕಲ್ ಮತ್ತು ಉತ್ತರ ಕನ್ನಡ ಟ್ಯಾಕ್ಸ್ ಪ್ರಾಕ್ಟೀಷನರ್ಸ್ ಅಸೋಸಿಯೇಷನ್ ಆಯೋಜಿಸಿದ್ದ, ಲೆಕ್ಕ ಪರಿಶೋಧನೆ, ಆದಾಯ ತೆರಿಗೆ ಕಾಯ್ದೆಗಳು ಮತ್ತು ವಿದೇಶಿ ದೇಣಿಗೆ ಸ್ವೀಕೃತಿ ಕಾಯ್ದೆಗಳ ಪಾಲನೆಯಲ್ಲಿನ ಸವಾಲುಗಳು ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರತಿಯೊಂದು ಸಂಸ್ಥೆ, ವ್ಯಕ್ತಿಯ ಆರ್ಥಿಕ ಚಟುವಟಿಕೆಯ ಮೇಲೆ ನಿಗಾ ಇಡುವ ಕೃತಕ ಬುದ್ಧಿಮತ್ತೆಯ ಕಾರ್ಯಾಚರಣೆ ಸರ್ಕಾರದಿಂದ ನಡೆಯುತ್ತಿದೆ ಎಂದರು.

ಅನೇಕ ಸಂಸ್ಥೆಗಳು ವಿದೇಶಿ ಹಣವನ್ನು ತಂದು ರಾಷ್ಟ್ರೀಯ ಚಟುವಟಿಕೆಯಲ್ಲಿ ತೊಡಗಿಸುತ್ತಿದ್ದವು. ಅದನ್ನು ನಿಯಂತ್ರಿಸುವುದು ಅನಿವಾರ್ಯವಾಗಿತ್ತು. ದೇಶದ್ರೋಹಿ ಚಟುವಟಿಕೆ ನಿಯಂತ್ರಿಸದಿದ್ದರೆ ಅಪಾಯವಿತ್ತು. ಹೀಗಾಗಿ, ಸರ್ಕಾರ ವಿದೇಶಿ ನೆರವು ಪಡೆಯುವ ಸಂಸ್ಥೆಗಳಿಂದ ಪ್ರತಿ ಪೈಸೆಯ ಲೆಕ್ಕ ಕೇಳುತ್ತಿದೆ. ಇದರ ಪರಿಣಾಮ ಭಯೋತ್ಪಾದಕ ಚಟುವಟಿಕೆಗೆ ಬಳಕೆಯಾಗುತ್ತಿದ್ದ ಹಣ ದುರುಪಯೋಗ ನಿಯಂತ್ರಣಕ್ಕೆ ಬಂದಿದೆ ಎಂದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !