ಸೀಮೆಎಣ್ಣೆ ಕುಡಿದು ಮಗು ಸಾವು

ಭಾನುವಾರ, ಮೇ 26, 2019
32 °C

ಸೀಮೆಎಣ್ಣೆ ಕುಡಿದು ಮಗು ಸಾವು

Published:
Updated:

ಚಾಮರಾಜನಗರ: ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಮೂರು ವರ್ಷದ ಹೆಣ್ಣು ಮಗುವೊಂದು ಆಕಸ್ಮಿಕವಾಗಿ ಸೀಮೆಎಣ್ಣೆ ಕುಡಿದು ಮೃತಪಟ್ಟಿದೆ.

ಗ್ರಾಮದ ಮಹದೇವಪ್ರಸಾದ್‌ ಎಂಬುವವರ ಪುತ್ರಿ ರುಚಿತಾ ಮೃತಪಟ್ಟ ಮಗು.

‘ಮಗಳು ಮಂಗಳವಾರ ಅಂಗಳದಲ್ಲಿ ಆಟವಾಡುತ್ತಿದ್ದಾಗ ಡಬ್ಬದಲ್ಲಿಟ್ಟಿದ್ದ ಸೀಮೆಎಣ್ಣೆಯನ್ನು ಆಕಸ್ಮಿಕವಾಗಿ ಕುಡಿದಿದ್ದಾಳೆ’ ಎಂದು ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.   

‘ತಕ್ಷಣವೇ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ಕರೆದುಕೊಯ್ಯಲಾಯಿತು. ಬುಧವಾರ ಮಗು ಮೃತಪಟ್ಟಿತು’ ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !