ಮೂರು ತಾಸು ಪೊಲೀಸರ ವಶದಲ್ಲಿದ್ದ ಚಿಂಚನಸೂರ್‌

ಮಂಗಳವಾರ, ಏಪ್ರಿಲ್ 23, 2019
32 °C

ಮೂರು ತಾಸು ಪೊಲೀಸರ ವಶದಲ್ಲಿದ್ದ ಚಿಂಚನಸೂರ್‌

Published:
Updated:

ಬೆಂಗಳೂರು: ಚೆಕ್‌ ಬೌನ್ಸ್‌ ಪ್ರಕರಣದ ವಿಚಾರಣೆಗೆ ಗೈರು ಹಾಜರಾಗಿದ್ದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಅವರನ್ನು ಬುಧವಾರ ಮೂರು ತಾಸು ಪೊಲೀಸರ ವಶಕ್ಕೆ ನೀಡಿದ್ದ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಬಳಿಕ ವಾರಂಟ್‌ ರಿಕಾಲ್‌ ಮಾಡಿತು.

ಮಾಜಿ ಸಚಿವರ ವಿರುದ್ಧ ಸೋಮವಾರ ಜಾಮೀನುರಹಿತ ವಾರಂಟ್‌ ಹೊರಡಿಸಲಾಗಿತ್ತು. ಬೆಳಿಗ್ಗೆ ಕೋರ್ಟ್‌ಗೆ ಹಾಜರಾದ ಚಿಂಚನಸೂರ್‌ ಅವರನ್ನು ಮಧ್ಯಾಹ್ನದವರೆಗೂ ಪೊಲೀಸರ ವಶಕ್ಕೆ ನೀಡಲಾಗಿತ್ತು.

ಚಿಂಚನಸೂರ್‌, 2011ರಲ್ಲಿ ನಾಗರಬಾವಿ ನಿವಾಸಿ ಅಂಜನಾ ಶಾಂತವೀರ್‌ ಅವರಿಂದ ₹11.88 ಕೋಟಿ ಸಾಲ ಪಡೆದಿದ್ದರು. ಇದಕ್ಕೆ 2015ರ ಏಪ್ರಿಲ್‌ 30ರ ದಿನಾಂಕ ನಮೂದಿಸಿ ಚೆಕ್‌ ನೀಡಿದ್ದರು. ಈ ಚೆಕ್‌ ಬೌನ್ಸ್‌ ಆಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !