ಭಾನುವಾರ, ಮಾರ್ಚ್ 26, 2023
31 °C

ಕೆ.ಆರ್. ಪೇಟೆ ಉಪಚುನಾವಣೆ: ಗಲಾಟೆಯಲ್ಲಿ ನಾಲ್ವರು ಜೆಡಿಎಸ್‌ ಕಾರ್ಯಕರ್ತರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೆ.ಆರ್.ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ತಾಲೂಕಿನ ಕೆ.ಆರ್.ಪೇಟೆ ಗಡಿಭಾಗದ ನಂಬಿಹಳ್ಳಿಯಲ್ಲಿ ಮಧ್ಯ ರಾತ್ರಿ ಗಲಾಟೆ ನಡೆದಿದೆ.

ಡಾ.ಸೂರಜ್ ರೇವಣ್ಣ ಹಾಗೂ ಏಳು ಜನರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಲಾಗಿದೆ.

ಘಟನೆಯಲ್ಲಿ ಎರಡು ಕಾರುಗಳು ಜಖಂ ಆಗಿದ್ದು, ಗಾಯಗೊಂಡಿರುವ ನಾಲ್ವರು ಜೆಡಿಎಸ್‌ನ ಕಾರ್ಯಕರ್ತರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುನಾವಣೆ ಅಂಗವಾಗಿ ಸ್ಥಳೀಯರೊಬ್ಬರ ಮನೆಯಲ್ಲಿ ಉಳಿದು ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಹಣ ಹಂಚಿಕೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಜಗಳ ಉಂಟಾಗಿದೆ.

ರಾತ್ರಿ ಎಸ್‌ಪಿ ರಾಮನಿವಾಸ್ ಸೆಪಟ್, ದಕ್ಷಿಣ ವಲಯ ಐಜಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.