ಬಗರ್‌ಹುಕುಂ ಅಕ್ರಮ: ತನಿಖೆಗೆ ಸಮಿತಿ

7

ಬಗರ್‌ಹುಕುಂ ಅಕ್ರಮ: ತನಿಖೆಗೆ ಸಮಿತಿ

Published:
Updated:

ಬೆಂಗಳೂರು: ಬಗರ್‌ ಹುಕುಂ ಸಾಗುವಳಿದಾರರಿಗೆ ಜಮೀನು ಮಂಜೂರು ಮಾಡುವಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಬಗರ್‌ ಹುಕುಂ ಮಂಜೂರಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ‘ಪ್ರಜಾವಾಣಿ’ಯಲ್ಲಿ ಸೋಮವಾರ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದ ಕುಮಾರ ಬಂಗಾರಪ್ಪ ಹಾಗೂ ಎಚ್‌.ಹಾಲಪ್ಪ, ತನಿಖೆಗೆ ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತನಿಖೆಯ ನಿರ್ಧಾರ ಪ್ರಕಟಿಸಿದರು.

ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಿರುವ ಬಗರ್‌ ಹುಕುಂ ಅಕ್ರಮಗಳ ಕುರಿತು ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಹಿಂದಿನ ತಹಶೀಲ್ದಾರರು ಅಕ್ರಮ ಎಸಗಿರುವುದು ಸಾಬೀತಾಗಿದೆ. ಅವರೀಗ ಶಿರಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.

‘ತಿರಸ್ಕರಿಸಲಾದ ಅರ್ಜಿಗಳನ್ನು ಮತ್ತೆ ಸಮಿತಿಯ ಮುಂದೆ ಮಂಡಿಸಲು ಅವಕಾಶವಿಲ್ಲ. ಆದರೆ, ತಿರಸ್ಕರಿಸಿದ ಅರ್ಜಿಗಳನ್ನೇ ಜಮೀನು ಮಂಜೂರಿಗೆ ಪರಿಗಣಿಸಲಾಗಿದೆ’ ಎಂದು ಅವರು ಒಪ್ಪಿಕೊಂಡರು. ‘ಅರ್ಜಿ ಹಾಕದವರಿಗೂ ಭೂಮಿ ಮಂಜೂರು ಮಾಡಲಾಗಿದೆ’ ಎಂದು ಮಾಧುಸ್ವಾಮಿ ಸಚಿವರ ಗಮನಕ್ಕೆ ತಂದರು.

ಮಧ್ಯೆ ಪ್ರವೇಶಿಸಿದ ವಿಧಾನಸಭಾಧ್ಯಕ್ಷರು, ‘ರಾಜ್ಯಮಟ್ಟದ ಅಧಿಕಾರಿಯಿಂದಲೇ ಎಲ್ಲ ಅಕ್ರಮಗಳ ತನಿಖೆ ನಡೆಸಿ. ವರದಿ ನೀಡಲು ಮೂರು ತಿಂಗಳು ಗಡುವು ನೀಡಿ’ ಎಂದು ಸೂಚಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !