ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್ ರೋಗಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ 52 ವರ್ಷದ ಶಿಕ್ಷಕರೊಬ್ಬರು ಗುರುವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರಾದವರ ಸಂಖ್ಯೆ 3ಕ್ಕೇರಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಮಹಿಳೆ,ಶಿಕಾರಿಪುರ ತಾಲ್ಲೂಕುಖವಾಸಪುರದ ಅಜ್ಜಿ ಈ ಮೊದಲು ಕೊರೊನಾಕ್ಕೆ ಬಲಿಯಾಗಿದ್ದರು.

ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 23 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 199ಕ್ಕೇರಿದೆ.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯಾಗಿರುವ ಅವರು ಈಚೆಗೆ ಬೆಂಗಳೂರಿನಲ್ಲಿ ನಡೆದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ನಾಲ್ಕು ದಿನಗಳ ಹಿಂದೆಉಸಿರಾಟದ ಸಮಸ್ಯೆಯಿಂದ ಶಿವಮೊಗ್ಗಕ್ಕೆ ಬಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ಇರುವುದು ದೃಢಪಟ್ಟ ನಂತರ ಮೆಗ್ಗಾನ್ ಕೋವಿಡ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.

34 ವರ್ಷದ ಮಹಿಳೆ (ಪಿ–1645) 32 ವರ್ಷದ ಮಹಿಳೆ(ಪಿ–1646), 60 ವರ್ಷದ ಪುರುಷ (ಪಿ–1647), 28 ವರ್ಷದ ಯುವಕ (ಪಿ–1648), 57 ವರ್ಷದ ಮಹಿಳೆ (ಪಿ–1649), 56 ವರ್ಷದ ಮಹಿಳೆ (ಪಿ–16450), 32 ವರ್ಷದ ಪುರುಷ (ಪಿ–16451), 40 ವರ್ಷದ ಪುರುಷ (ಪಿ–16452), 32 ವರ್ಷದ ಪುರುಷ (ಪಿ–16453), 68 ವರ್ಷದ ಪುರುಷ (ಪಿ–16454), 44 ವರ್ಷದ ಮಹಿಳೆ (ಪಿ–16455), 43 ವರ್ಷದ ಪುರುಷ (ಪಿ–16456) 39 ವರ್ಷದ ಮಹಿಳೆ(ಪಿ–16457), 60 ವರ್ಷದ ಮಹಿಳೆ (ಪಿ–16458), 70 ವರ್ಷದ ಪುರುಷ (ಪಿ–16459), 34 ವರ್ಷದ ಮಹಿಳೆ (ಪಿ–16460), 22 ವರ್ಷದ ಯುವತಿ (ಪಿ–16461), 65 ವರ್ಷದ ಮಹಿಳೆ (ಪಿ–16462), 36 ವರ್ಷದ ಮಹಿಳೆ (ಪಿ–16462), 42 ವರ್ಷದ ಮಹಿಳೆ(ಪಿ–16464), 31 ವರ್ಷದ ಪುರುಷ(ಪಿ–16465), 35 ವರ್ಷದ ಪುರುಷ(ಪಿ–16466), 37 ವರ್ಷದ ಪುರುಷ(ಪಿ–16467)ರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

ಪಿ-16645ರಿಂದ ಪಿ-16667ರವರೆಗಿನ23 ಸೋಂಕಿತರಲ್ಲಿ 8 ಮಂದಿಗೆ ಮೂಲ ಪತ್ತೆಯಾಗಿಲ್ಲ. 9 ಮಂದಿಗೆ ಶೀತ, ಜ್ವರ, ಕೆಮ್ಮು ಲಕ್ಷಣಗಳಿದ್ದವು. ನಾಲ್ವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಇಬ್ಬರು ಅಂತರಾಜ್ಯ ಪ್ರಯಾಣದಮಾಡಿದ್ದಾರೆ.ಸೋಂಕಿತರಲ್ಲಿ12 ಮಹಿಳೆಯರು, 11 ಮಂದಿ ಪುರುಷರಿದ್ದಾರೆ.

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ನಾಡಕಚೇರಿ ನೌಕರನೊಬ್ಬನ ಪತ್ನಿಗೆ ಸೋಂಕು ತಗುಲಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ನಾಡ ಕಚೇರಿ ಹಾಗೂ ಗ್ರಾಮದ ಸುತ್ತಮುತ್ತ ಔಷಧಿ ಸಿಂಪಡಣೆ ಮಾಡಲಾಗಿದೆ. ಗುರುವಾರ 8 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 117 ಮಂದಿ ಗುಣಮುಖರಾಗಿದ್ದಾರೆ. 80 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.