ಅಪಾಯದ ಸ್ಥಿತಿಯಲ್ಲಿ ಸಿಎಂ ಕುಮಾರಸ್ವಾಮಿ ಸಂಚರಿಸುವ ಮಾರ್ಗ

7

ಅಪಾಯದ ಸ್ಥಿತಿಯಲ್ಲಿ ಸಿಎಂ ಕುಮಾರಸ್ವಾಮಿ ಸಂಚರಿಸುವ ಮಾರ್ಗ

Published:
Updated:

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದ ಮುಖ್ಯಮಂತ್ರಿ ಎಚ್‌. ಡಿ ಕುಮಾರಸ್ವಾಮಿ ಅವರು ಸಂಚರಿಸುವ ಮಾರ್ಗ ಅಪಾಯದ ಸ್ಥಿತಿಯಲ್ಲಿದ್ದು, ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. 

ಸಿಎಂ ವಾಹನಕ್ಕೆ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ. 

ಕುಮಾರಾಧಾರಾ, ಗುತ್ತಿಗಾರು ಮಾರ್ಗದ ಹೆದ್ದಾರಿಯಲ್ಲಿ ಕುಮಾರಾಧಾರಾ ನದಿ ನೀರು ಹರಿಯುತ್ತಿದ್ದು, ಹಲವೆಡೆ ಸಂಪೂರ್ಣ ಜಲಾವೃತವಾಗಿದೆ. 

ಕುಮಾರಸ್ವಾಮಿ ಪ್ರಯಾಣ ಬೆಳೆಸುತ್ತಿರುವ ಮಾರ್ಗದಲ್ಲಿ ನೀರು ಮತ್ತೆ ಹೆಚ್ಚಾಗುವ ಸಾಧ್ಯತೆಯಿರುವ ಕಾರಣ ಸುಬ್ರಹ್ಮಣ್ಯದಿಂದ ತರಾತುರಿಯಲ್ಲಿ ಹೊರಟಿದ್ದಾರೆ ಎಂದು ತಿಳಿದು ಬಂದಿದೆ. 

ಮಹದಾಯಿ ವಿಚಾರದಲ್ಲಿ ಸಕಾರಾತ್ಮಕ ತೀರ್ಪು ಬರುವ ಬಗ್ಗೆ ನಿರೀಕ್ಷೆ

ಮಹದಾಯಿ ವಿಚಾರದಲ್ಲಿ ಸಕಾರಾತ್ಮಕ ತೀರ್ಪು ಬರುವ ಬಗ್ಗೆ ನಿರೀಕ್ಷೆಯಿದೆ. ಯಾವುದೇ ನಕಾರಾತ್ಮಕ ತೀರ್ಪು ಆದ್ರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್‌.ಡಿಮ ಕುಮಾರಸ್ವಾಮಿ ಹೇಳಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತನಾಡಿದ ಸಿಎಂ, ಕಾವೇರಿಯಿಂದ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಕಾವೇರಿ ನ್ಯಾಯಾಧಿಕರಣದಲ್ಲಿ ಕಾಲ ಕಾಲಕ್ಕೆ ನೀರು ಬಿಡುವಂತೆ ವಾದ ಮಾಡಿದ್ದಾರೆ. ತಮಿಳುನಾಡಿಗೆ ನೀರು ಬಿಡುವುದಕ್ಕೆ ಜಲಾಶಯ ಕಟ್ಟಿದ್ದೇವಾ? ರಾಜ್ಯದ ಜನರ ತೆರಿಗೆಯಿಂದ ಜಲಾಶಯ ಕಟ್ಟಿದ್ದೇವೆ. ಅನಗತ್ಯ ಸಂಘರ್ಷಕ್ಕೆ ಅವಕಾಶ ಮಾಡಬಾರದು. ಮೇಕೆದಾಟು ಯೋಜನೆಗೆ ಅವಕಾಶ ನೀಡಲು ಕೇಳಿದ್ದೇವೆ’ ಎಂದು ಹೇಳಿದ್ದಾರೆ. 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !