ಬೆಂಗಳೂರು: ದೇವರಾಜ ಅರಸು ಅಭಿವೃದ್ಧಿ ನಿಗಮದ ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಯ ಅಭಿವೃದ್ಧಿ ಅಧಿಕಾರಿ ಜಗದೇವಪ್ಪ ಅವರು ಒಂದು ಮನೆ, ನಾಲ್ಕು ನಿವೇಶನ ಮತ್ತು 15 ಎಕರೆ ಜಮೀನು ಸೇರಿದಂತೆ ಭಾರಿ ಆಸ್ತಿ ಗಳಿಸಿರುವುದನ್ನು ಭ್ರಷ್ಟಾಚಾರ ನಿಗ್ರಹ ದಳ ಪತ್ತೆ ಹಚ್ಚಿದೆ.

ಆದಾಯ ಮೀರಿ ಆಸ್ತಿ ಸಂಪಾದಿಸಿದ ದೂರುಗಳನ್ನು ಆಧರಿಸಿ ಮಂಗಳವಾರ ಜಗದೇವಪ್ಪ, ಬೆಳಗಾವಿಯ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿ ಸುಭಾಷ್ ಸುರೇಂದ್ರ ಉಪ್ಪಾರ ಹಾಗೂ ಬಾಗಲಕೋಟೆಯ ಡಿಡಿಎಲ್ಆರ್ ಗೋಪಾಲ ಎಲ್. ಮಾಲಗತ್ತಿ ಅವರ ಮನೆ ಮತ್ತು ಕಚೇರಿ ಸೇರಿ 12 ಸ್ಥಳಗಳ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳ ತಂಡ ಅಪಾರ ಆಸ್ತಿ ಪತ್ತೆ ಹಚ್ಚಿದೆ.

ಜಗದೇವಪ್ಪ ಅವರು ಕಲಬುರ್ಗಿ ನಗರದಲ್ಲಿ 1 ಮನೆ, 4 ನಿವೇಶನ, 14.35 ಎಕರೆ ಕೃಷಿ ಜಮೀನು, ಕಲಬುರ್ಗಿ ವಾಣಿಜ್ಯ ಸಂಕೀರ್ಣದಲ್ಲಿ ಒಂದು ಮಳಿಗೆ, ₹ 15 ಲಕ್ಷದ ಗೃಹ ಉಪಯೋಗಿ ವಸ್ತುಗಳು, 64 ಗ್ರಾಂ ಚಿನ್ನ, 134 ಗ್ರಾಂ ಬೆಳ್ಳಿ, 1 ದ್ವಿಚಕ್ರ ವಾಹನ, ₹ 91 ಸಾವಿರ ನಗದು ಮತ್ತು ₹ 15 ಲಕ್ಷ ಮೌಲ್ಯದ ಪೀಠೋಪಕರಣ ಮತ್ತಿತರ ವಸ್ತುಗಳನ್ನು ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.