ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಸಾಹಿತ್ಯ ಸಂಭ್ರಮ ಇದೇ 20ರಿಂದ ನೋಂದಣಿ

Last Updated 17 ಡಿಸೆಂಬರ್ 2018, 19:03 IST
ಅಕ್ಷರ ಗಾತ್ರ

ಧಾರವಾಡ: ‘ಧಾರವಾಡ ಸಾಹಿತ್ಯ ಸಂಭ್ರಮ‘ದ 7ನೇ ಆವೃತ್ತಿ ಜನವರಿ 18, 19 ಮತ್ತು 20ರಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯಲಿದ್ದು, ಡಿ.20ರಿಂದ ಆನ್‌ಲೈನ್‌ ನೋಂದಣಿ ಆರಂಭವಾಗಲಿದೆ.

ಈ ವರ್ಷದ ಸಂಭ್ರಮದಲ್ಲಿ ‘ಸಮಕಾಲೀನ ದಲಿತ ಸಾಹಿತ್ಯ ಮತ್ತು ಸಂಘಟನೆ: ಕೆಲವು ಸವಾಲುಗಳು’, ‘ಡಾ. ಗಿರಡ್ಡಿ ಗೋವಿಂದರಾಜ : ಒಂದು ಸಾಂಸ್ಕೃತಿಕ ನೆನಪು’, ‘ಮಹಾತ್ಮ ಗಾಂಧಿ: 150’, ‘ಕೊಡಗು ಮತ್ತು ಕೇರಳದಲ್ಲಿನ ಜಲಪ್ರಳಯಗಳ ಹಿಂದಿನ ನೆಲದ ಸತ್ಯಗಳು‘, ‘ರಂಗಗೀತೆಗಳ ಚರಿತ್ರೆ ಮತ್ತು ವಿಕಾಸ: ಒಂದು ಪ್ರಾತ್ಯಕ್ಷಿಕೆ’ ಸೇರಿದಂತೆ ವಿವಿಧ ವಿಷಯಗಳ ಕುರಿತು ಮೂರು ದಿನ ಚರ್ಚೆ
ನಡೆಯಲಿದೆ.

ಪ್ರತಿನಿಧಿ ನೋಂದಣಿ ಶುಲ್ಕ ₹1 ಸಾವಿರ ಇದ್ದು, www.dharwadsahityasambhrama.com ಜಾಲತಾಣದಿಂದ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿಯು 350 ಪ್ರತಿನಿಧಿಗಳಿಗೆ ಸೀಮಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಕಾರ್ಯಕ್ರಮದ ನೇರ ಪ್ರಸಾರವನ್ನು www.vividlipi.com/live-event/ ಮೂಲಕ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗೆಸಮೀರ ಜೋಶಿ (98454 47002) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT