ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಕೋರ್ಟ್ ತೀರ್ಪು: ಅನರ್ಹರು ಹೀಗೆ ಹೇಳ್ತಾರೆ...

Last Updated 13 ನವೆಂಬರ್ 2019, 7:23 IST
ಅಕ್ಷರ ಗಾತ್ರ

ರಾಜ್ಯದ ಜನರ ತೀವ್ರ ಕುತೂಹಲ ಕೆರಳಿಸಿದ್ದಸುಪ್ರೀಂ ಕೋರ್ಟ್‌ ತೀರ್ಪು ಹೊರಬಂದಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ‘ಪ್ರಜಾವಾಣಿ’ಗೆ ನೀಡಿದ ಪ್ರತಿಕ್ರಿಯೆಗಳು ಇಲ್ಲಿವೆ


ಶಿವರಾಮ್‌ ಹೆಬ್ಬಾರ್‌:ಇಂತಹದೇ ತೀರ್ಪು ಬರಬಹುದು ಎಂಬ ನಿರೀಕ್ಷೆ ಇತ್ತು. ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ತಡೆಯುವಂತಿಲ್ಲ ಎಂದು ಚುನಾವಣಾ ಆಯೋಗವೇ ಹೇಳಿತ್ತು. ನಮ್ಮನ್ನು ಇದುವರೆಗೆ ಮುಖ್ಯಮಂತ್ರಿ ಸಹಿತ ಯಾರೂ ಸಂಪರ್ಕಿಸಿಲ್ಲ. ನಾಳೆಯಿಂದಲೇ ಚುನಾವಣಾ ಕಣಕ್ಕೆ ಇಳಿಯಲಿದ್ದೇವೆ.

ಪ್ರತಾಪ್‌ ಗೌಡ ಪಾಟೀಲ್‌:ತೀರ್ಪು ಸಂಪೂರ್ಣ ತೃಪ್ತಿ ತಂದಿಲ್ಲ.ಆದರೆ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವಕಾಶ ನೀಡಿದ್ದಕ್ಕೆ ಸಮಾಧಾನವಿದೆ. ಚುನಾವಣೆಯಲ್ಲಿ ಗೆದ್ದು ಬರುವುದು ನಿಶ್ಚಿತ.

ಬಿ.ಸಿ.ಪಾಟೀಲ್:ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ನಮ್ಮನ್ನು ಜನ ಮತ್ತೆ ಗೆಲ್ಲಿಸುತ್ತಾರೆ.

ಎಂ.ಟಿ.ಬಿ. ನಾಗರಾಜ್:ನಮ್ಮ ನಿರೀಕ್ಷೆ ಹುಸಿಯಾಗಿದೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶ ನೀಡಿದ್ದಕ್ಕೆ ಸಮಾಧಾನವಿದೆ. ನಾನು ಮೂರು ಬಾರಿ ಗೆದ್ದು ಬಂದವನು.ಜನರ ನಾಡಿಮಿಡಿತ ನನಗೆ ಗೊತ್ತಿದೆ. ಮತ್ತೆ ಗೆಲ್ಲುವ ವಿಶ್ವಾಸ ಇದೆ.

ಕೆ. ಗೋಪಾಲಯ್ಯ:ಚುನಾವಣೆಯಲ್ಲಿ ನಿಲ್ಲುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಸಮಾಧಾನವಿದೆ. ನನ್ನ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ. ನನ್ನ ಜತೆಗೆ ಈಗ ಬಿಜೆಪಿ ಶಕ್ತಿ ಇದೆ. ಬಿಜೆಪಿಯಲ್ಲಿ ಅಸಮಾಧಾನ ಇದ್ದರೆ ಪಕ್ಷದ ಹೈಕಮಾಂಡ್ ಅದನ್ನು ನಿಭಾಯಿಸುತ್ತದೆ. ನಾನು ಮಾಡಿದ ಕೆಲಸ ನನ್ನ ಕೈಹಿಡಿಯಲಿದೆ.

ಎಚ್‌.ವಿಶ್ವನಾಥ್‌:ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುತ್ತೇವೆ. ಸ್ಪೀಕರ್ ನಮ್ಮನ್ನು ಮೂರೂವರೆ ವರ್ಷ ರಾಜಕೀಯದಿಂದ ದೂರ ಇಡಲು ಪ್ರಯತ್ನಿಸಿದ್ದರು. ಅದನ್ನು ಕೋರ್ಟ್ ತಳ್ಳಿಹಾಕಿದೆ. ಇದರಿಂದ ನಮಗೆಲ್ಲ ಖುಷಿಯಾಗಿದೆ. ರಾಜಕಾರಣಿಯಾದವರಿಗೆ ಚುನಾವಣೆ ಎಂಬುದು ಬಹಳ ಮುಖ್ಯ.

ಆರ್‌.ಶಂಕರ್: ನಾವು ರಾಜೀನಾಮೆಯನ್ನೇ ಕೊಟ್ಟಿರಲಿಲ್ಲ. ನಮ್ಮ ಶಾಸಕ ಸ್ಥಾನ ಉಳಿಯಬೇಕಿತ್ತು.

ಮುನಿರತ್ನ ನಾಯ್ಡು:ಎಲ್ಲರೂ ಸ್ವಂತ ಬಲದಿಂದಲೇ ಗೆದ್ದು ಬರುವ ವಿಶ್ವಾಸ ಇದೆ. ನನ್ನ ಮತ್ತು ಪ್ರತಾಪ ಗೌಡ ಅವರ ತೀರ್ಪಿನ ಬಗ್ಗೆ ತೀರ್ಪಿನ ಪ್ರತಿ ಓದಿ ತಿಳಿದುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT