ನಮ್ಮ ಶಾಸಕರು ಬಿಜೆಪಿ ಜೊತೆ ಎಷ್ಟು ಸಭೆ ನಡೆಸಿದ್ದಾರೆ ಅನ್ನೋದು ಗೊತ್ತಿದೆ: ಡಿಕೆಶಿ

ಗುರುವಾರ , ಜೂಲೈ 18, 2019
28 °C

ನಮ್ಮ ಶಾಸಕರು ಬಿಜೆಪಿ ಜೊತೆ ಎಷ್ಟು ಸಭೆ ನಡೆಸಿದ್ದಾರೆ ಅನ್ನೋದು ಗೊತ್ತಿದೆ: ಡಿಕೆಶಿ

Published:
Updated:

ಬೆಂಗಳೂರು: ‘ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ಲ ಅನ್ಕೊಂಡಿದ್ದಾರೆ ಬಿಜೆಪಿಯವರು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಏಳು ಬಾರಿ ಶಾಸಕನಾಗಿದ್ದವನು. ರಾಜಕೀಯ ಏನು ಅನ್ನೋದು ನನಗೂ ಗೊತ್ತು. ನಮ್ಮ ಶಾಸಕರ ಜೊತೆ ಎಷ್ಟೆಷ್ಟು ಮೀಟಿಂಗ್ ಮಾಡಿದ್ದಾರೆ ಎಂಬುದೆಲ್ಲಾ ಗೊತ್ತಿದೆ ನನಗೆ’ ಎಂದು ಚಾಟಿ ಬೀಸಿದ್ದಾರೆ.

‘ನಮ್ಮ ಶಾಸಕರು ಸೇರಿದಂತೆ ಬಿಜೆಪಿಯ ಯಾವ ಶಾಸಕರಿಗೂ ಚುನಾವಣೆ ನಡೆಯೋದು ಬೇಕಿಲ್ಲ. ಬಿಜೆಪಿಯ ಶಾಸಕರೇ ನನಗೆ ಫೋನ್ ಮಾಡಿ ಅಣ್ಣಾ ಹೇಗಾದ್ರು ಮಾಡಿ ಎಲೆಕ್ಷನ್‌ಗೆ ಹೋಗೋದು ತಪ್ಪಿಸಿ ಎಂದಿದ್ದಾರೆ. ಚುನಾವಣೆ ಬೇಕಿರುವುದು ಬಿಜೆಪಿಯ ದೆಹಲಿ ಮಟ್ಟದ ನಾಯಕರಿಗೆ ಮಾತ್ರ. ಹೋಗಿರೊ ಶಾಸಕರನ್ನು ಕರೆತರುವ ಪ್ರಯತ್ನ ಮಾಡ್ತಿದ್ದೇವೆ. ಯಾವ ರೀತಿ ಅನ್ನೋದನ್ನ ಹೇಳೋದಕ್ಕೆ ಆಗಲ್ಲ.’ ಎಂದು ಹೇಳಿದರು.


ದೇವೇಗೌಡರೊಂದಿಗೆ ಸಚಿವರಾದ  ಡಿ.ಕೆ. ಶಿವಕುಮಾರ್,
ಎಚ್.ಡಿ. ರೇವಣ್ಣ, ಡಿ.ಸಿ. ತಮ್ಮಣ್ಣ, ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಹಾಗೂ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಸಮಾಲೋಚನೆ.

ಮಲ್ಲಿಕಾರ್ಜುನ ಖರ್ಗೆ ಅಥವಾ ಸಿದ್ದರಾಮಯ್ಯ ಅವರನ್ನ ಮುಖ್ಯಮಂತ್ರಿ ಮಾಡಿದರೆ ಶಾಸಕರು ವಾಪಸ್ ಬರ್ತಾರೆ ಅನ್ನೊ ವಿಚಾರದ ಬಗ್ಗೆ ಪ್ರತಿಕ್ರಿಯಿ ಅವರು, ‘ಐದು ವರ್ಷ ನೀವೇ ಮುಖ್ಯಮಂತ್ರಿ ಅಂತ ಕುಮಾರಸ್ವಾಮಿ ಅವರಿಗೆ ಹೇಳಿದ್ದೀವಿ. ಅವರನ್ನು ವರ್ಷದವರೆಗೆ ಇಳಿಸುವ ಮಾತಿಲ್ಲ. ಅತೃಪ್ತರ ಮನವೊಲಿಸುವ ಸಭೆ ನಡೆಸುತ್ತಿದ್ದೀವಿ ನೋಡೋಣ ಏನಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !