ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವದ ಬಗ್ಗೆ ತಿಳಿದುಕೊಳ್ಳಿ

ನಮ್ಗೇನ್‌ ಬೆಲೆನೇ ಇಲ್ವಾ ನಾಟಕ ಪ್ರದರ್ಶನ
ಅಕ್ಷರ ಗಾತ್ರ

‘ಹುಚ್ಚರಯ್ಯ ಹುಚ್ಚರು‘,‘ದಾರಿ ಯಾವುದಯ್ಯ ವೈಕುಂಟಕ್ಕೆ‘ ಎಂಬ ನಾಟಕಗಳ ಮೂಲಕ ಎಲ್ಲರನ್ನೂ ನಗಿಸಿ ವಿಚಾರಧಾರೆಯನ್ನು ತಿಳಿಸಿರುವ ಪಯಣ ತಂಡವು ಮತ್ತೆ ನಿಮ್ಮಲ್ಲರನ್ನೂ ನಗಿಸಲು ರಂಗದ ಮೇಲೆ ತರುತ್ತಿದೆ ’ನಮ್ಗೇನ್‌ ಬೆಲೆನೇ ಇಲ್ವಾ’ ಎಂಬ ನಾಟಕವನ್ನ.

ಈ ತಂಡವು 2015ರಲ್ಲಿ ಸ್ಥಾ‍ಪನೆಯಾಗಿ ಇಲ್ಲಿಯವರೆಗೂ 3 ನಾಟಕಗಳನ್ನು ರಂಗದ ಮೇಲೆ ತಂದು 26 ಪ್ರದರ್ಶನಗಳನ್ನು ಕಂಡಿವೆ. ಈ ನಾಟಕದ 3ನೇ ಪ್ರದರ್ಶನ ಇದಾಗಿದ್ದು, ನವೆಂಬರ್‌ 1ರಂದುಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ರಾತ್ರಿ 7.30ಕ್ಕೆ ಪ್ರದರ್ಶನ ಕಾಣಲಿದೆ.

ಇದು ಹಾಸ್ಯ ಮತ್ತು ಸಂಗೀತ ಮಿಶ್ರಿತ ನಾಟಕವಾಗಿದ್ದು. ಹಾಸ್ಯದ ಮೂಲಕ ಜನರಿಗೆ ಸಂದೇಶ ನೀಡುವುದು ತಂಡದ ಉದ್ದೇಶವಾಗಿದೆ. ಒಂದೇ ಸಾರಾಂಶದ 2 ವಿಭಿನ್ನ ಕಥೆಗಳ ವೇದಿಕೆ ಇದಾಗಿದ್ದು, ಯಾವುದೇ ವಿರಾಮವಿಲ್ಲದೆ ನಾಟಕ ಸಾಗುವುದೇ ಇದರ ವೈಶಿಷ್ಟ್ಯವಾಗಿದೆ. ಇದಕ್ಕೆ ಬೆಳಕು ವಿನ್ಯಾಸ, ಸಂಗೀತ, ರಂಗಸಜ್ಜಿಕೆಯೇ ಜೀವಾಳವಾಗಿದೆ.

ಜೀವನದಲ್ಲಿ ಕೂಡಿಟ್ಟ ಹಣವೋ, ಮತ್ತೊಬ್ಬರ ಋಣವೋ,ಕಾಪಾಡಿದ ಅಂತಸ್ತೋ,ಸಂಪಾದಿಸಿದ ಬಾಂಧವ್ಯವೋ ಅಥವಾಪಡೆದುಕೊಂಡ ಪ್ರೀತಿಯೋಇಂಥಹ ಗೊಂದಲಗಳ ಗೊಂಚಲಿನಲ್ಲಿ ಚಿಗುರಿದಂತಹ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ಈ ನಾಟಕ.

ಜೀವನದಲ್ಲಿಪ್ರೀತಿ, ಹಣ, ಹೆಸರು, ಮಮತೆ, ಋಣ ಇವೆಲ್ಲವೂ ಬೆಲೆ ಕಟ್ಟಲು ಸಾಧ್ಯವಿಲ್ಲ ಸರಿ ಆದರೆ ಇವೆಲ್ಲದ್ದಕ್ಕೂ ಮೂಲ ಜೀವ. ಮೊದಲು ಈ ಜೀವದ ಬೆಲೆ ತಿಳಿದುಕೊಳ್ಳಿ, ಜೀವ ಹೋದ ಮೇಲೆ ಅಲ್ಲ ಎಂಬುದನ್ನು ನಾಟಕದಲ್ಲಿ ಹೇಳಹೊರಟಿದೆ. ನಾಟಕದಲ್ಲಿ ನಗಿಸುತ್ತೇವೆ ಕೊನೆಗೆ ಪ್ರೇಕ್ಷಕರ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುವಂತೆ ಮಾಡಿ ಅದರ ಬಗ್ಗೆ ಜನರು ತಿಳಿದುಕೊಳ್ಳಲು ಬಿಡುತ್ತೇವೆ. ಎಂದು ನಿರ್ದೇಶಕ ಎಂ.ಅರುಣ್‌ ಕುಮಾರ್‌ ಹೇಳುತ್ತಾರೆ.

ರಂಗದ ಮೇಲೆ 7 ಜನ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರೀತಿಸಿ ಮದುವೆಯಾದ ಪ್ರೇಮಿಗಳ ಮೊದಲ ರಾತ್ರಿ ನಡೆಯುತ್ತದೆಯೋ ಇಲ್ಲವೋ ಎಂಬುದು ಒಂದು ಕಥೆ. ಭಗ್ನಪ್ರೇಮಿಯೊಬ್ಬ ಸಾಯಲು ಬಂದಾಗ ಅಲ್ಲಿ ಹುಡುಗಿ ಪರಿಚಯವಾಗಿ ಅವನ ಮನಸ್ಸನ್ನು ಪರಿವರ್ತನೆ ಮಾಡುವ ಬಗೆ ನಾಟಕ ಮುಂದುವರಿಯುತ್ತದೆ.

ಪಯಣ ತಂಡದ ಕುರಿತು: ಇದು ಹೊಸ ಕಲಾವಿದರಿಗೆ ಅವಕಾಶ ಸಿಗಬೇಕು ಎಂಬುವ ಕಾರಣದಿಂದ ಈ ತಂಡವನ್ನು 2015ರಲ್ಲಿಅರುಣ್‌ ಎಂ. ಸೂರ್ಯ ಕಟ್ಟಿದ್ದರು. ಇದರಲ್ಲಿ ಬೇರೆ ತಂಡದಲ್ಲಿ ಕಾರ್ಯನಿರತರಾಗಿದ್ದ ಕಲಾವಿದರು, ವಿದ್ಯಾರ್ಥಿಗಳು, ಬರಹಗಾರರು, ಕಲಾಸಕ್ತರು ಸೇರಿಕೊಂಡಿದ್ದಾರೆ. ಈ ತಂಡವು ತಮ್ಮಲ್ಲಿರುವ ಕಲಾವಿದರ ಬಳಿಯೇ ಕಥೆ ರಚಿಸಿ ಸಂಭಾಷಣೆ, ಸಂಗೀತವನ್ನು ಸಂಯೋಜನೆ ಮಾಡಿ ನಾಟಕವನ್ನು ಪ್ರದರ್ಶಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT