ಮಂಗಳವಾರ, ಜನವರಿ 28, 2020
25 °C

ನಾಟಕ ಅಕಾಡೆಮಿ ಪ್ರಶಸ್ತಿ ವಾಪಸ್: ರಂಗಕರ್ಮಿ ಬನ್ನಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)
ಪ್ರಕ್ರಿಯೆಯನ್ನು ಖಂಡಿಸಿ, ರಂಗಕರ್ಮಿ ವಸಂತ ಬನ್ನಾಡಿ ಅವರು ನಾಟಕ ಅಕಾಡೆಮಿ ಪ್ರಶಸ್ತಿಯನ್ನು ವಾಪಸ್ ಮಾಡುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

ಬನ್ನಾಡಿ ಅವರಿಗೆ ಅಕಾಡೆಮಿಯು 2002ರಲ್ಲಿ ಪ್ರಶಸ್ತಿ ನೀಡಿತ್ತು. 17 ವರ್ಷಗಳ ಬಳಿಕ ಪ್ರಶಸ್ತಿ ಹಿಂದಿರುಗಿಸಲು ಮುಂದಾಗಿದ್ದಾರೆ. 

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ. ಅಲ್ಲದೆ ನಗದು ಬಹುಮಾನವನ್ನೂ ಡಿ.ಡಿ ಮೂಲಕ ಹಿಂದಿರುಗಿಸುತ್ತೇನೆ’ ಎಂದು ಬನ್ನಾಡಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು