ಬೆಂಗಳೂರು: ದ್ವಿತೀಯ ಪಿಯು ವಿಜ್ಞಾನ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಇದ್ದ ಅಡೆತಡೆಗಳು ಸಂಪೂರ್ಣವಾಗಿ ನಿವಾರಣೆಯಾಗಿದ್ದು ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಪೂರ್ಣಗೊಂಡು ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳುವ ವಿಶ್ವಾಸವನ್ನು ಸಚಿವ ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ದಯಾನಂದ ಸಾಗರ ವಿದ್ಯಾ ಸಂಸ್ಥೆಯಲ್ಲಿನಮೌಲ್ಯಮಾಪನಕೇಂದ್ರಕ್ಕೆ ಬುಧವಾರ ಭೇಟಿ ನೀಡಿದ ಸಚಿವ ಸುರೇಶ್ ಕುಮಾರ್, ಉಪನ್ಯಾಸಕ ಸಂಘಟನೆಗಳು ಇಲಾಖೆಯ ಕ್ರಮಕ್ಕೆ ತಮ್ಮ ಸಹಕಾರವನ್ನು ನೀಡುತ್ತಿದ್ದು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿವೆಯೆಂದು ಹೇಳಿದರು.

ವಿಜ್ಞಾನ ಹೊರತುಪಡಿಸಿದಂತೆ ಅನ್ಯ ವಿಷಯಗಳ ಮೌಲ್ಯಮಾಪನ ಪ್ರಕ್ರಿಯೆ ಉಪನ್ಯಾಸಕರ ಸಹಕಾರದಿಂದ ಬಹುಪಾಲು ಪೂರ್ಣಗೊಂಡಿದ್ದು, ಅಂಕಗಳ ಗಣಕೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದರು. ಎಲ್ಲ ಮೌಲ್ಯಮಾಪನ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಇಲಾಖೆಯು ಜಾರಿಯಲ್ಲಿಟ್ಟಿದ್ದು, ಬೆಂಗಳೂರು ಸುತ್ತ ಮುತ್ತ ಲಿನ 12 ಜಿಲ್ಲೆಗಳ ವಿಜ್ಞಾನ ಬೋಧಕರು, ಇಲಾಖೆಯ ನಿರ್ದೇಶನದಂತೆ ತಕ್ಷಣದಿಂದ ಕಡ್ಡಾಯವಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.