ಶನಿವಾರ, ಜುಲೈ 31, 2021
28 °C

ಕೃತಿ ಕಾರಂತ್‌ಗೆ ಫೆಲೊಷಿಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಸೆಂಟರ್‌ ಫಾರ್‌ ವೈಲ್ಡ್‌ಲೈಫ್‌ ಸ್ಟಡೀಸ್‌ ನಿರ್ದೇಶಕಿ, ಅರಣ್ಯ ಸಂರಕ್ಷಣಾ ವಿಜ್ಞಾನಿ ಡಾ. ಕೃತಿ ಕಾರಂತ್‌ 2020ರ ಪ್ರತಿಷ್ಠಿತ ಐಸನ್‌ಹೊವರ್‌ ಫೆಲೊಷಿಪ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಜಾಗತಿಕವಾಗಿ ಈ ಗೌರವಕ್ಕೆ ಪಾತ್ರರಾದ 20 ಮಹಿಳೆಯರಲ್ಲಿ ಕೃತಿ ಕಾರಂತ್ ಸೇರಿದ್ದಾರೆ. 

ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ ಗಣ್ಯರಿಗೆ ಈ ಫೆಲೊಷಿಪ್‌ ನೀಡಲಾಗುತ್ತದೆ. ‘1953ರಿಂದ ಈ ಗೌರವ ನೀಡಲಾಗುತ್ತಿದ್ದು, ವಿಶ್ವದಾದ್ಯಂತ ಈವರೆಗೆ 2,400 ಗಣ್ಯರನ್ನು ಗುರುತಿಸಿ ಗೌರವಿಸಲಾಗಿದೆ. ಈ ಪೈಕಿ 82 ಸಾಧಕರು ಭಾರತದವರು’ ಎಂದು ಐಸನ್‌ಹೊವರ್‌ ಫೆಲೊಷಿಪ್‌ನ ಅಧ್ಯಕ್ಷ ಜಾರ್ಜ್‌ ಡೆ ಲಾಮಾ ತಿಳಿಸಿದ್ದಾರೆ. 

‘ಫೆಲೊಷಿಪ್‌ನ ಮಹಿಳಾ ನಾಯಕತ್ವ ಕಾರ್ಯಕ್ರಮದಡಿ ಕೃತಿ ಅವರನ್ನು ಗೌರವಿಸಲಾಗಿದೆ. ತೀವ್ರ ಸ್ಪರ್ಧೆಯ ನಡುವೆ ಭಾರತದಿಂದ ಈ ಗೌರವಕ್ಕೆ ಪಾತ್ರವಾಗುವಲ್ಲಿ ಕೃತಿ ಯಶಸ್ವಿಯಾಗಿದ್ದಾರೆ’ ಎಂದು ಲಾಮಾ ಪ್ರಶಂಸಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು