ಚುನಾವಣೆ: ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ

ಭಾನುವಾರ, ಮೇ 26, 2019
32 °C

ಚುನಾವಣೆ: ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ

Published:
Updated:

ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಹಕರು ಕ್ಲಿಕ್ಕಿಸುವ ಛಾಯಾಚಿತ್ರಗಳನ್ನು ಪ್ರೋತ್ಸಾಹಿಸಲು ರಾಜ್ಯ ಮಟ್ಟದ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ತಿಳಿಸಿದರು.

ಏ.18 ಮತ್ತು 23ರಂದು ಮತದಾನದ ವೇಳೆ ತೆಗೆದ ಚಿತ್ರಗಳನ್ನು ಆಯೋಗಕ್ಕೆ ಕಳುಹಿಸಿದರೆ ಆಕರ್ಷಕ ಬಹುಮಾನ ನೀಡಲಾಗುವುದು. ಮತದಾನದ ದಿನದ ಸಂಭ್ರಮ, ವಿಶೇಷ ಮತದಾನದ ವಾತಾವರಣ, ಸಿದ್ಧತೆ, ಮತಗಟ್ಟೆ ಇತ್ಯಾದಿ ವಿಷಯಗಳನ್ನು ಹೊಂದಿರಬೇಕು. ಯಾವುದೇ ರಾಜಕೀಯ ಪಕ್ಷಗಳ ಪ್ರಚಾರ, ಅಭ್ಯರ್ಥಿ, ಅವರ ಚಿಹ್ನೆ ಚಿತ್ರದಲ್ಲಿ ಇರಬಾರದು.

ಛಾಯಾಚಿತ್ರಗಳನ್ನು ಕಡ್ಡಾಯವಾಗಿ ಡಿಜಿಟಲ್ ಮಾದರಿಯಲ್ಲಿ ಕಳುಹಿಸಬೇಕು. ಚಿತ್ರ ಪ್ರಕಟವಾಗಿದ್ದರೂ ವಾಟರ್ ಮಾರ್ಕ್, ಲೋಗೋ, ಕಾಪಿರೈಟ್ ಹೊಂದಿರಕೂಡದು. ಸಲ್ಲಿಸಲಾದ ಎಲ್ಲಾ ಚಿತ್ರಗಳನ್ನು ಮರುಮುದ್ರಣ ಮಾಡಲು ಛಾಯಾಗ್ರಾಹಕರಿಗೆ ಅವಕಾಶ ಇಲ್ಲ. ಮುಖ್ಯ ಚುನಾವಣಾಧಿಕಾರಿ ಈ ಚಿತ್ರಗಳ ಕಾಪಿರೈಟ್ ಹೊಂದುತ್ತಾರೆ. ಚಿತ್ರ ತೆಗೆದ ದಿನಾಂಕ, ಸ್ಥಳದ ಹೆಸರಿನೊಂದಿಗೆ ವಿವರವಾದ ಚಿತ್ರ ಶೀರ್ಷಿಕೆ ಬರೆಯಬೇಕು. ಮೊಬೈಲ್ ಚಿತ್ರಗಳನ್ನೂ ಪರಿಗಣಿಸಲಾಗುವುದು. ಆದರೆ, ಅಗತ್ಯ ಪಿಕ್ಸೆಲ್ ಉಳ್ಳ ನಿಗದಿತ ಗಾತ್ರ ಹೊಂದಿರಬೇಕು ವಿವರಿಸಿದ್ದಾರೆ.

ಸ್ಪರ್ಧಿಗಳು ತಮ್ಮ ಗುರುತಿನ ಚೀಟಿ ಮತ್ತು ಸಂಪರ್ಕ ಸಂಖ್ಯೆಯೊಂದಿಗೆ karloksabha.pro@gmail.comಗೆ ಏ.28ರ ಸಂಜೆ 5ರೊಳಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !