ವಾಹನದ ಮೇಲೆ ಕಾಡಾನೆ ದಾಳಿ

7

ವಾಹನದ ಮೇಲೆ ಕಾಡಾನೆ ದಾಳಿ

Published:
Updated:

ಸುಬ್ರಹ್ಮಣ್ಯ: ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ 8 ಮಂದಿ ಯಾತ್ರಿಕರಿದ್ದ ಮಾರುತಿ ಆಮ್ನಿಯ ಮೇಲೆ ಕಾಡಾನೆಯೊಂದು ಶನಿವಾರ ಬೆಳಿಗ್ಗೆ ಬಿಳಿನೆಲೆ ಸಮೀಪದ ಕಿದು ಎಂಬಲ್ಲಿ ದಾಳಿ ನಡೆಸಿತು. ಆ ವೇಳೆಗೆ ಕೆಎಸ್‌ಆರ್‌ಟಿಸಿ ಬಸ್‌ ಬಂದ ಕಾರಣ ಆನೆ ಕಾಡಿನತ್ತ ಓಡಿ ಹೋಯಿತು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕುಡ್ಲೂರು ನಿವಾಸಿ ಗಿರೀಶ್ ಎಂಬುವವರು ಕುಟುಂಬದವರ ಜತೆ ಕಾರಿನಲ್ಲಿ ಬರುತ್ತಿದ್ದಾಗ ಬೆಳಿಗ್ಗೆ 7.30ರ ವೇಳೆಗೆ ಆನೆ ಎದುರಾಯಿತು. ಗಿರೀಶ್ ಕಾರನ್ನು ನಿಲ್ಲಿಸಿದರು. ಕೂಡಲೇ ಆನೆ ಕಾರಿನ ಮೇಲೆ ದಾಳಿ ನಡೆಸಿದೆ. ಕಾರಿನ ಮುಂಭಾಗಕ್ಕೆ ಕಾಲು ಹಾಗೂ ಸೊಂಡಿಲಿನಿಂದ ಹಾನಿ ಮಾಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮುಂಭಾಗದಲ್ಲಿದ್ದ ಇಬ್ಬರು ಆನೆ ದಾಳಿಯಿಂದ ಗಾಯಗೊಂಡರು. ಕಾರಿನಲ್ಲಿದ್ದ ಇತರ ಆರೂ ಮಂದಿ ಆನೆಗೆ ಬೆದರಿ ಮುದುರಿ ಕುಳಿತಿದ್ದಾಗಲೇ ಬಸ್ಸೊಂದು ಶಬ್ದ ಮಾಡುತ್ತ ಬಂತು. ಇದರಿಂದ ಆನೆ ಬೆದರಿ ಕಾರನ್ನು ಬಿಟ್ಟು ಕಾಡಿನತ್ತ ತೆರಳಿತು.

ಗಾಯಾಳುಗಳು ಕಡಬದಲ್ಲಿ ಚಿಕಿತ್ಸೆ ಪಡೆದರು. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !