ಕೆರೆ ನೀರಲ್ಲಿ ಮುಳುಗಿ ಕಾಡಾನೆ ಸಾವು

ಮಂಗಳವಾರ, ಏಪ್ರಿಲ್ 23, 2019
31 °C

ಕೆರೆ ನೀರಲ್ಲಿ ಮುಳುಗಿ ಕಾಡಾನೆ ಸಾವು

Published:
Updated:
Prajavani

ಗೋಣಿಕೊಪ್ಪಲು: ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಗ್ರಾಮದ ಕಾಫಿ ತೋಟದ ಕೆರೆಯಲ್ಲಿ ನೀರು ಕುಡಿಯಲು ಬಂದಿದ್ದ ಕಾಡಾನೆಯೊಂದು ಸಾವನ್ನಪಿದೆ. ಮೂರು ದಿನಗಳ ಹಿಂದೆ ಕಾಡಾನೆ ಸಾವನ್ನಪಿರುವ ಶಂಕೆ ವ್ಯಕ್ತವಾಗಿದ್ದು ಸೋಮವಾರ ಬೆಳಕಿಗೆ ಬಂದಿದೆ. 

ಮೃತಪಟ್ಟ ಗಂಡಾನೆಗೆ 15 ವರ್ಷ ಇರುಬಹುದು ಎಂದು ಅಂದಾಜಿಸಲಾಗಿದೆ. ಪಶುವೈದ್ಯ ರೆಹಮಾನ್‌ ಅವರು ಮರಣೋತ್ತರ ಪರೀಕ್ಷೆ ನಡೆಸಿದರು ಎಂದು ವಿರಾಜಪೇಟೆ ಡಿಎಫ್‌ಒ ಮರಿಯಾ ಕ್ರಿಸ್ತರಾಜ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲೂ ಬೇಸಿಗೆ ಬೇಗೆ ಹೆಚ್ಚಾಗುತ್ತಿದ್ದು ಅರಣ್ಯ ಪ್ರದೇಶದಲ್ಲಿದ್ದ ಕೆರೆಗಳಲ್ಲಿ ನೀರು ಕಡಿಮೆಯಾಗಿದೆ. ಕಾಡಾನೆಗಳಿಗೆ ಅರಣ್ಯದಲ್ಲಿ ನೀರು ಲಭ್ಯವಾಗುತ್ತಿಲ್ಲ. ಹದಿನೈದು ದಿನಗಳ ಹಿಂದೆಯೂ ದಾಹ ನೀಗಿಸಿಕೊಳ್ಳಲು ಚೇಲಾವರ ಗ್ರಾಮದ ಕಾಫಿ ತೋಟದ ಕೆರೆಗೆ ಬಂದಿದ್ದ ಮೂರು ಆನೆಗಳು ನೀರಿನಲ್ಲಿ ಸಿಲುಕಿ ಮೇಲೆ ಬರಲು ಸಾಧ್ಯವಾಗದೇ ಪರದಾಡಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರ ನೆರವಿನಲ್ಲಿ ಕಾರ್ಯಾಚರಣೆ ನಡೆಸಿ ಮೂರು ಆನೆಗಳನ್ನೂ ರಕ್ಷಣೆ ಮಾಡಿದ್ದರು.  

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !