ಶನಿವಾರ, ಅಕ್ಟೋಬರ್ 19, 2019
27 °C

ಏರ್‌ ಇಂಡಿಯಾ ಸಂಸ್ಥೆಯಲ್ಲಿ 170 ಹುದ್ದೆಗಳು

Published:
Updated:

ಏರ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ಖಾಲಿ ಇರುವ 170 ಸಹಾಯಕ ಸೂಪರ್‌ವೈಸರ್‌ ಹುದ್ದೆಗಳನ್ನು ಭರ್ತಿ ಮಾಡಲು ರ್ಜಿ ಆಹ್ವಾನಿಸಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. 

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಡಿಪ್ಲೊಮಾ, ಬಿಸಿಎ, ಬಿಎಸ್ ಸಿ,  ಐಟಿ ಅಥವಾ ಕಂಪ್ಯೂಟರ್ ಪ್ರಮಾಣ ಪತ್ರ (ಕನಿಷ್ಠ 6 ತಿಂಗಳು) ಪಡೆದಿರಬೇಕು.

ವಯೋಮಿತಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 38 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 36 ವರ್ಷ, ಹಾಗೂ ಸಾಮಾನ್ಯ ಅಥವಾ ಮೀಸಲಾತಿ ಸಹಿತ ಅಭ್ಯರ್ಥಿಗಳಿಗೆ 33 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಮಾಜಿ ಯೋಧ ಅಭ್ಯರ್ಥಿಗಳಿಗೆ ₹ 500, ಇತರೆ ಅಭ್ಯರ್ಥಿಗಳಿಗೆ ₹ 1000.

ಆಯ್ಕೆ ವಿಧಾನ: ಆನ್‌ಲೈನ್‌ ಕೌಶಲ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 28 ಸೆಪ್ಟೆಂಬರ್‌ 2019.
 

Post Comments (+)