ಸೋಮವಾರ, ಸೆಪ್ಟೆಂಬರ್ 16, 2019
23 °C

ಎಂಜಿನಿಯರಿಂಗ್‌ 4ನೇ ಸುತ್ತಿನ ಕೌನ್ಸೆಲಿಂಗ್‌

Published:
Updated:

ಬೆಂಗಳೂರು: ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್‌ ಕೋರ್ಸ್‌ಗಳ ಸೀಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಉಳಿದಿದ್ದು, ನಾಲ್ಕನೇ ಸುತ್ತಿನ ಕೌನ್ಸೆಲಿಂಗ್‌ ನಡೆಸಲು ಸರ್ಕಾರ ಸೂಚಿಸಿದೆ.

ಮಂಗಳವಾರ (ಅ. 20) ಬೆಳಿಗ್ಗೆ 11ರೊಳಗೆ ಹೊಸದಾಗಿ ಇಚ್ಛೆಯನ್ನು ನಮೂದಿಸಬಹುದು. ಅಂದು ಮಧ್ಯಾಹ್ನ 2ರ ಬಳಿಕ ಸೀಟುಹಂಚಿಕೆಯನ್ನು ಪ್ರಕಟಿಸಲಾಗುವುದು.‘21 ಮತ್ತು 22ರಂದು ಸೀಟುಹಂಚಿಕೆಯನ್ನು ದೃಢಪಡಿಸುವುದು, ಶುಲ್ಕ ತುಂಬುವುದು ಮತ್ತು ಕಾಲೇಜು ಪ್ರವೇಶ ಆದೇಶವನ್ನು ಡೌನ್‌ಲೋಡ್‌ ಮಾಡಬೇಕು. 23ರಂದು ಸಂಜೆ 5.30ರೊಳಗೆ ಕಾಲೇಜುಗಳಿಗೆ ಹಾಜರಾಗಬೇಕು’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಶೇ30ರಷ್ಟು ಸೀಟುಗಳು ಖಾಲಿ: ಸಿಇಟಿ ಮೂಲಕ 65 ಸಾವಿರ ಎಂಜಿನಿಯರಿಂಗ್‌ ಸೀಟುಗಳನ್ನು ಭರ್ತಿಗೆ ಅವಕಾಶವಿತ್ತು. 3ನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಯ ಬಳಿಕ 22 ಸಾವಿರ ಸಿಟು ಖಾಲಿ ಬಿದ್ದಿವೆ.

ಕಾಮೆಡ್‌–ಕೆಯಲ್ಲಿ ಸುಮಾರು 7 ಸಾವಿರ ಸೀಟುಗಳಷ್ಟೇ ಭರ್ತಿಯಾಗಿದ್ದು, 9,782 ಸೀಟುಗಳು ಖಾಲಿ ಬಿದ್ದಿವೆ.

ಪಿಯು ಉಪನ್ಯಾಸಕರ ಆಯ್ಕೆ ಪಟ್ಟಿ: ಇದೇ 26ರಂದು ಪದವಿಪೂರ್ವ ಕಾಲೇಜು ಉಪನ್ಯಾಸಕರ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.

 

Post Comments (+)