ಗುರುವಾರ , ಮಾರ್ಚ್ 4, 2021
18 °C
ಪಾನಮತ್ತನಿಂದ ದಾಳಿ: ಶಂಕೆ

ಮನೆಯ ಮೇಲೆ ಗುಂಡಿನ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಡಿಕೇರಿ: ನಗರದಲ್ಲಿ ಮನೆ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ವ್ಯಕ್ತಿಯ ಕುರಿತು ಮನೆ ಮಾಲೀಕರಿಂದ ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನ್‌ ಡಿ. ಪನ್ನೇಕರ್‌ ತಿಳಿಸಿದ್ದಾರೆ.

‘ಮನೆಯಲ್ಲಿದ್ದವರು ಬಂದೂಕು ಶಬ್ದ ಕೇಳಿ ಕಿರುಚಾಟ ನಡೆಸಿದ್ದರಿಂದ ಕಾರು ಹತ್ತಿ ಪರಾರಿಯಾದ. ಗುಂಡು ಹಾರಿಸಿದ್ದ ವ್ಯಕ್ತಿ ಪಾನಮತ್ತನಂತೆ ಕಾಣಿಸುತ್ತಿದ್ದ. ನನ್ನ ಮೇಲೆ ಯಾರಿಗೂ ದ್ವೇಷ ಇರಲಿಲ್ಲ. ಕಾರಿನಲ್ಲಿ ಇನ್ನೂ ಕೆಲವರು ಇದ್ದರು’ ಎಂದು ಮಾಲೀಕ ಜನಾರ್ದನ್ ತಿಳಿಸಿದ್ದಾರೆ. ಇದೀಗ ತನಿಖೆ ಕಾರ್ಯ ಚುರುಕುಗೊಂಡಿದೆ

ಅಪರಿಚಿತ ಯಾರು?: ಮೇಲ್ನೋಟಕ್ಕೆ ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಕಂಡುಬಂದರೂ ರಾತ್ರೋರಾತ್ರಿ ವಾಸದ ಮನೆಯ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಯಾರು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.

ಈ ಮಾರ್ಗದಲ್ಲಿ ಎರಡು ಸ್ಟಾರ್‌ ಹೋಟೆಲ್‌ಗಳು, ಹಲವು ಹೋಂಸ್ಟೇಗಳಿವೆ. ಪ್ರತಿನಿತ್ಯ ಹೆಚ್ಚಿನ ಪ್ರವಾಸಿಗರು ಸಂಚರಿಸುತ್ತಲೇ ಇರು ತ್ತಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯೂ ಪಕ್ಕದಲ್ಲಿಯೇ ಇದ್ದು, ಗುಂಡು ಹೊಡೆದಿದ್ದು ಯಾವ ಕಾರಣಕ್ಕೆ ಎಂಬುದನ್ನು ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.

ರಾತ್ರಿ ವೇಳೆ ನಗರದಲ್ಲಿ ಪೊಲೀಸ್‌ ಗಸ್ತು ಕಡಿಮೆಯಿದ್ದು, ರಾತ್ರಿಯಿಡೀ ಅಪರಿ ಚಿತರು ಸಂಚರಿಸುತ್ತಲೇ ಇರುತ್ತಾರೆಂಬ ಆರೋಪವೂ ಕೇಳಿಬಂದಿದೆ.

ವಅಪರಿಚಿತ ಯಾರು?

ಮೇಲ್ನೋಟಕ್ಕೆ ಉದ್ದೇಶಪೂರ್ವಕ ಕೃತ್ಯವಲ್ಲ ಎಂದು ಕಂಡುಬಂದರೂ ರಾತ್ರೋರಾತ್ರಿ ವಾಸದ ಮನೆಯ ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಯಾರು ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.

ಈ ಮಾರ್ಗದಲ್ಲಿ ಎರಡು ಸ್ಟಾರ್‌ ಹೋಟೆಲ್‌ಗಳು, ಹಲವು ಹೋಂಸ್ಟೇಗಳಿವೆ. ಪ್ರತಿನಿತ್ಯ ಹೆಚ್ಚಿನ ಪ್ರವಾಸಿಗರು ಸಂಚರಿಸುತ್ತಲೇ ಇರುತ್ತಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯೂ ಪಕ್ಕದಲ್ಲಿಯೇ ಇದ್ದು, ಗುಂಡು ಹೊಡೆದಿದ್ದು ಯಾವ ಕಾರಣಕ್ಕೆ ಎಂಬುದನ್ನು ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.

ರಾತ್ರಿ ವೇಳೆ ನಗರದಲ್ಲಿ ಪೊಲೀಸ್‌ ಗಸ್ತು ಕಡಿಮೆಯಾಗಿದ್ದು, ರಾತ್ರಿಯಿಡೀ ಅಪರಿಚಿತರು ಸಂಚರಿಸುತ್ತಲೇ ಇರುತ್ತಾರೆ ಎಂಬ ಆರೋಪವೂ ಕೇಳಿಬಂದಿದೆ.

* ಮನೆ ಮಾಲೀಕರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದೆ.
–ಡಾ.ಸುಮನ್‌ ಡಿ. ಪನ್ನೇಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

* 30 ವರ್ಷಗಳಿಂದಲೂ ಇದೇ ಮನೆಯಲ್ಲಿ ವಾಸವಿದ್ದೇನೆ. ಯಾರೊಂದಿಗೂ ವಿರೋಧ ಕಟ್ಟಿಕೊಂಡಿಲ್ಲ.
–ಜನಾರ್ದನ್‌, ಮನೆ ಮಾಲೀಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು