ಭಾನುವಾರ, ನವೆಂಬರ್ 17, 2019
28 °C

ರಾಜ್ಯ ಹೈಕೋರ್ಟ್‌‌ಗೆ ಐವರು ನೂತನ ನ್ಯಾಯಮೂರ್ತಿಗಳ ನೇಮಕ

Published:
Updated:

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಐದು ಮಂದಿ ನ್ಯಾಯಮೂರ್ತಿಗಳನ್ನು ನೇಮಕಮಾಡಿ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಹೈಕೋರ್ಟ್ ವಕೀಲ ವೃಂದದಿಂದ ಎನ್.ಎಸ್. ಸಂಜಯ ಗೌಡ, ಜ್ಯೋತಿ ಮೂಲಿಮನಿ, ಆರ್.ನಟರಾಜ್, ಹೇಮಂತ್ ಚಂದನಗೌಡರ್ ಹಾಗೂ ಪ್ರದೀಪ್ ಸಿಂಗ ಯೆರೂರು ಇವರನ್ನು ಕರ್ನಾಟಕ ಹೈಕೋರ್ಟ್ ಹಂಗಾಮಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದ್ದು, ಗುರುವಾರ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಪ್ರತಿಕ್ರಿಯಿಸಿ (+)