ಪ್ರಸಾದ ಸೇವಿಸಿ 150 ಭಕ್ತರು ಅಸ್ವಸ್ಥ

7

ಪ್ರಸಾದ ಸೇವಿಸಿ 150 ಭಕ್ತರು ಅಸ್ವಸ್ಥ

Published:
Updated:
Deccan Herald

ಜಗಳೂರು: ತಾಲ್ಲೂಕಿನ ಬಿಳಿಚೋಡು ಸಮೀಪದ ಕುರ್ಲಗಟ್ಟೆ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಪ್ರಸಾದ ಸೇವಿಸಿದ 150ಕ್ಕೂ ಹೆಚ್ಚು ಭಕ್ತರು ಅಸ್ವಸ್ಥರಾಗಿದ್ದಾರೆ.

ಗ್ರಾಮದ ಸಮೀಪದ ಕುರ್ಲಗಟ್ಟೆಯಲ್ಲಿ ಕಡೇ ಶ್ರಾವಣ ಶನಿವಾರದ ಅಂಗವಾಗಿ ಪರವು (ಸಾಮೂಹಿಕ ದಾಸೋಹ) ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ನೂರಾರು ಭಕ್ತರು ಪಂಕ್ತಿಗಳಲ್ಲಿ ಪ್ರಸಾದ ಸ್ವೀಕರಿಸಿದ್ದರು. ಆಹಾರ ಸೇವಿಸಿದ ಕೆಲ ಸಮಯದ ನಂತರ ಎಲ್ಲರೂ ಸಾಮೂಹಿಕವಾಗಿ ವಾಂತಿ ಮಾಡುತ್ತಾ ಅಸ್ವಸ್ಥರಾದರು.

ಅಸ್ವಸ್ಥರನ್ನು ಆಂಬುಲೆನ್ಸ್ ಹಾಗೂ ಬಸ್‌ಗಳಲ್ಲಿ ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಲಾಗಿದೆ.

‘ದಾಸೋಹದಲ್ಲಿ ಗೋದಿ ಪಾಯಸ ಹಾಗೂ ಅನ್ನವನ್ನು ಭಕ್ತರು ಸೇವಿಸಿದ್ದರು. ಏನಾಯಿತೋ ಗೊತ್ತಿಲ್ಲ. ಮಕ್ಕಳೂ ಸೇರಿ 150ಕ್ಕೂ ಹೆಚ್ಚು ಜನ ಅಸ್ವಸ್ಥರಾದರು’ ಎಂದು ಗ್ರಾಮದ ಲಕ್ಷ್ಮಣ್‌ ಎಂಬುವವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಿಂಡಿ ಸೇವನೆ; ವಿದ್ಯಾರ್ಥಿಗಳು ಅಸ್ವಸ್ಥ
ಯಳಂದೂರು:
ತಾಲ್ಲೂಕಿನ ಮೆಳ್ಳಹಳ್ಳಿ ಗೇಟ್ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಬೆಳಿಗ್ಗೆ ಉಪಾಹಾರ ಸೇವಿಸಿದ 36 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.

ಬೆಳಿಗ್ಗೆ ಉಪ್ಪಿಟ್ಟು, ಕೇಸರಿ ಬಾತ್ ಮಾಡಲಾಗಿತ್ತು. ಉಪ್ಪಿಟ್ಟು ಸೇವಿಸಿದ ಮಕ್ಕಳಿಗೆ ತೊಂದರೆಯಾಗಿಲ್ಲ. ಆದರೆ, ಕೇಸರಿಬಾತ್‌ ತಿಂದ ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ನಂತರ ಹೊಟ್ಟೆನೋವು ಕಾಣಿಸಿಕೊಂಡಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾರೆ.

ಮಕ್ಕಳು ವಾಂತಿ, ನಿರ್ಜಲೀಕರಣ, ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ತಕ್ಷಣವೇ ಚಿಕಿತ್ಸೆ ನೀಡಿದ್ದು, ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !