ಗೌರಿ ಲಂಕೇಶ್‌ಗೆ ಫ್ರಾನ್ಸ್‌ ಪ್ರಶಸ್ತಿ

7

ಗೌರಿ ಲಂಕೇಶ್‌ಗೆ ಫ್ರಾನ್ಸ್‌ ಪ್ರಶಸ್ತಿ

Published:
Updated:
Deccan Herald

ಬೆಂಗಳೂರು: ಕರ್ತವ್ಯನಿರತರಾಗಿದ್ದಾಗ ಹತ್ಯೆಗೊಳಗಾದ ವರದಿಗಾರರಿಗೆ ನೀಡಲಾಗುವ ಫ್ರಾನ್ಸ್‌ನ ಬೇಯಾಕ್ಸ್‌ –ಕಲ್ವಾಡೋಸ್‌ ಪ್ರಶಸ್ತಿಯನ್ನು ಪತ್ರಕರ್ತೆ ಗೌರಿ ಲಂಕೇಶ್‌ ಅವರಿಗೆ ಘೋಷಿಸಲಾಗಿದೆ. ಅಕ್ಟೋಬರ್‌ 8ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಪ್ರಶಸ್ತಿಯನ್ನು ಯುದ್ಧ ವರದಿಗಳನ್ನು ಮಾಡುವ ವರದಿಗಾರರಿಗೆ ಫ್ರಾನ್ಸ್‌ನಲ್ಲಿ ನೀಡಲಾಗುತ್ತದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಜನರಿಗೆ ಯುದ್ಧ ಮಾಹಿತಿಯನ್ನು ನೀಡುವ ಪತ್ರಕರ್ತರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

ಪ್ರಶಸ್ತಿಗೆ ಗೌರಿ ಅವರನ್ನು ಆಯ್ಕೆಮಾಡಿದ ಕುರಿತು ಅದನ್ನು ಸ್ಥಾಪನೆ ಮಾಡಿದ ಪಾಲುದಾರ ಸಂಸ್ಥೆ ರಿಪೋರ್ಟರ್ಸ್‌ ಫ್ರಾನ್ಸ್‌ ಫ್ರಂಟಿಯರ್ಸ್‌ನ ಪ್ರತಿನಿಧಿಗಳು ಕವಿತಾ ಲಂಕೇಶ್‌ ಅವರಿಗೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಹುತಾತ್ಮ ಪತ್ರಕರ್ತರ ಸ್ಮಾರಕದಲ್ಲಿ ಗೌರಿ ಅವರ ಹೆಸರನ್ನೂ ಅನಾವರಣ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗೌರಿಯವರ ಸಾಧನೆಗಳ ಕುರಿತು ಸಮಾರಂಭದಲ್ಲಿ ಕವಿತಾ ಮಾತನಾಡಲಿದ್ದಾರೆ.

ಎರಡನೇ ಮಹಾಯುದ್ಧದಲ್ಲಿ ಫ್ರಾನ್ಸ್‌ ದೇಶವನ್ನು ಜರ್ಮನಿಯ ನಾಜಿಗಳ ಹಿಡಿತದಿಂದ ಸ್ವತಂತ್ರವಾಗಿಸಲು ನಡೆದ ಮೈತ್ರಿಕೂಟದ ಕಾರ್ಯಾಚರಣೆ ‘ನಾರ್ಮಂಡಿ ಲ್ಯಾಂಡಿಂಗ್ಸ್‌’ನ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !