ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಣೆ– ಪ್ರಮಾಣ ಬಿಟ್ಟು ಸಾಲ ಮನ್ನಾ ಮಾಡಿ: ಕಾರಜೋಳ

Last Updated 30 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಭೆ– ಸಮಾರಂಭಗಳಲ್ಲಿ ಆಣೆ ಪ್ರಮಾಣ ಮಾಡುವುದನ್ನು ಬಿಟ್ಟು, ಸಾಲ ಮನ್ನಾಕ್ಕೆ ಅಗತ್ಯವಿರುವ ₹43 ಸಾವಿರ ಕೋಟಿ ಹಣ ಹೊಂದಿಸಲು ಯಾವ ವ್ಯವಸ್ಥೆ ಮಾಡಿದ್ದಾರೆ ಎಂಬುದನ್ನು ಹೇಳಲಿ’ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಸವಾಲು ಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 1.40 ಲಕ್ಷ ರೈತರು ಸಾಲ ಮಾಡಿದ್ದಾರೆ. ಇದರ ಒಟ್ಟು ಮೊತ್ತ ₹798 ಕೋಟಿ. ಡಿ.28 ರಂದು ಮುಖ್ಯಮಂತ್ರಿಯವರು ಕೇವಲ ₹17.56 ಕೋಟಿ ಸಾಲ ಮನ್ನಾದ ಋಣ ಮುಕ್ತ ಪತ್ರ ನೀಡಿ ಹೋಗಿದ್ದಾರೆ. ಈ ರೀತಿ ಗಿಮಿಕ್ ಮಾಡುವುದನ್ನು ಬಿಟ್ಟು, ನವೆಂಬರ್‌ 31 ರವರೆಗೆ ಎಷ್ಟು ರೈತರು ಸಾಲ ಮಾಡಿದ್ದಾರೊ, ಅವರ ಎಲ್ಲ ಸಾಲವನ್ನೂ ಕೂಡಲೇ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ 6 ತಾಲ್ಲೂಕಿನ 30 ರೈತರಿಗೆ ಋಣಮುಕ್ತ ಪತ್ರ ವಿತರಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಮಗನ ಮೇಲೆ ಆಣೆ ಮಾಡಿ ರಾಜ್ಯದ ಎಲ್ಲ ರೈತರ ₹46 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಅವರು ಹೇಳಿದ್ದಾರೆ. ಇಂತಹ ನಾಟಕಗಳನ್ನು ನಿಲ್ಲಿಸಲಿ ಎಂದು ಕಾರಜೋಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT