ಬಿಜೆಪಿಯವರು ಹೇಳಿದಾಕ್ಷಣ ಸರ್ಕಾರ ಬೀಳಲ್ಲ: ಸತೀಶ ಜಾರಕಿಹೊಳಿ ತಿರುಗೇಟು

7

ಬಿಜೆಪಿಯವರು ಹೇಳಿದಾಕ್ಷಣ ಸರ್ಕಾರ ಬೀಳಲ್ಲ: ಸತೀಶ ಜಾರಕಿಹೊಳಿ ತಿರುಗೇಟು

Published:
Updated:

ಬೆಳಗಾವಿ: ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬೀಳಲ್ಲ. ಶಾಸಕರು ಇರುತ್ತಾರೆ. ಅವರು ಸರ್ಕಾರ ರಚಿಸುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಳೆದ 6 ತಿಂಗಳಿನಿಂದಲೂ ಅವರು (ಬಿಜೆಪಿ) ಇದನ್ನೇ ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ಸರ್ಕಾರ ಬಿದ್ದಿಲ್ಲ. ಯಾರೂ ರಾಜೀನಾಮೆ ಕೊಡಲ್ಲ. ಸಚಿವ ಸಂಪುಟ ವಿಸ್ತರಣೆಯಾದಾಗ ಕೆಲವರಿಗೆ ಅಸಮಾಧಾನ ಉಂಟಾಗುವುದು ಸ್ವಾಭಾವಿಕ. ಅಸಮಾಧಾನಗೊಂಡವರನ್ನು ಪಕ್ಷದ ವರಿಷ್ಠರು ಮಾತನಾಡಿಸಿ, ಸಮಾಧಾನ ಪಡಿಸುತ್ತಾರೆ’ ಎಂದು ಹೇಳಿದರು.

‘ಸಹೋದರ ರಮೇಶ ಜಾರಕಿಹೊಳಿ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ. ಅವರ ಜೊತೆ ನಾನೂ ಸೇರಿದಂತೆ ಪಕ್ಷದ ವರಿಷ್ಠರು ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !