ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವಾಳಿ ನಿಭಾಯಿಸುವ ಕೋರ್ಸ್‌ ಆರಂಭ

Last Updated 4 ಮೇ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಸಂಸ್ಥೆಗಳು, ಕಂಪನಿಗಳು ದಿವಾಳಿಯಾಗುವುದು ಆಗಾಗ ನಡೆಯುತ್ತಲೇ ಇದ್ದು, ದಿವಾಳಿತನವನ್ನು ಸಮರ್ಥವಾಗಿ ನಿಭಾಯಿಸಬಲ್ಲ ವೃತ್ತಿಪರರನ್ನು ಅಣಿಗೊಳಿಸುವ ಕೋರ್ಸ್‌ ಆರಂಭವಾಗಲಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಪೊರೇಟ್‌ ಅಫೇರ್ಸ್‌ (ಐಸಿಸಿಎ) ಪದವಿ ಮಟ್ಟದ ಈ ದಿವಾಳಿತನ ನಿರ್ವಹಣಾ ತರಬೇತಿ ನೀಡಲಿದ್ದು, ಎರಡು ವರ್ಷಗಳಲ್ಲಿ ಪಕ್ಕಾ ವೃತ್ತಿಪರರನ್ನು ಸಿದ್ಧಪಡಿಸಲಿದೆ. ಭಾರತೀಯ ದಿವಾಳಿತನ ಮಂಡಳಿ (ಇನ್‌ಸಾಲ್ವೆನ್ಸಿ ಆಂಡ್‌ ಬ್ಯಾಕ್ರಪ್ಟ್ಸಿಬೋರ್ಡ್‌ ಆಫ್‌ ಇಂಡಿಯಾ) ಈ ಕೋರ್ಸ್‌ಗೆ ಮಾನ್ಯತೆ ನೀಡಿದೆ.

‘ಚಾರ್ಟರ್ಡ್‌ ಅಕೌಂಟೆಂಟ್‌, ಕಾಸ್ಟ್‌ ಅಕೌಂಟೆಂಟ್‌, ಕಾನೂನು ಪದವೀಧರ, ಎಂಬಿಎ, ಎಂಜಿನಿಯರ್‌, ಅರ್ಥಶಾಸ್ತ್ರ, ವಾಣಿಜ್ಯ, ಹಣಕಾಸು ವಿಷಯಗಳ ಸ್ನಾತಕೋತ್ತರ ಪದವೀಧರರು ಈ ಕೋರ್ಸ್‌ ಮಾಡಬಹುದು. ಅವರ ವಯಸ್ಸು 28ರೊಳಗೆ ಇರಬೇಕು’ ಎಂದು ಐಸಿಸಿಎ ಸಂಸ್ಥೆಯ ಸೆಂಟರ್‌ ಫಾರ್ ಇನ್‌ಸಾಲ್ವೆನ್ಸಿ ಆಂಡ್‌ ಬ್ಯಾಂಕ್ರ್ಟಪ್ಸಿಯ ಮುಖ್ಯಸ್ಥರಾದ ಡಾ.ನೀತಿ ಶಿಖಾ ಹೇಳಿದರು.

ನವದೆಹಲಿಯ 14 ಎಕರೆ ಕ್ಯಾಂಪಸ್‌ನಲ್ಲಿ ಈ ಕೋರ್ಸ್‌ ಆರಂಭವಾಗಲಿದೆ. ಎರಡು ವರ್ಷದ ಈ ಕೋರ್ಸ್‌ಗೆ ₹ 12.5 ಲಕ್ಷ ಶುಲ್ಕ ಇದ್ದು, ಶಿಷ್ಯವೇತನದ ಮೂಲಕ ಶೇ 40ರಷ್ಟು ಶುಲ್ಕ ವಿನಾಯಿತಿಯೂ ಸಾಧ್ಯ. ಅಭ್ಯರ್ಥಿಗಳು ಪ್ರವೇಶ ಪರೀಕ್ಷೆ ಉತ್ತೀರ್ಣರಾಗ
ಬೇಕು. ಕೋರ್ಸ್‌ ಮುಗಿಸಿದವರು 10 ವರ್ಷದ ಬಳಿಕ ನೇರವಾಗಿ ಪರೀಕ್ಷೆ ಬರೆಯುವುದಕ್ಕೂ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT