ರಾಜಕೀಯವಾಗಿ ನನ್ನನ್ನು ಮುಗಿಸಲು ಯತ್ನ: ಕುಮಾರಸ್ವಾಮಿ

ಶುಕ್ರವಾರ, ಏಪ್ರಿಲ್ 19, 2019
27 °C

ರಾಜಕೀಯವಾಗಿ ನನ್ನನ್ನು ಮುಗಿಸಲು ಯತ್ನ: ಕುಮಾರಸ್ವಾಮಿ

Published:
Updated:

ಉಡುಪಿ: ‘ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ನನ್ನು ಸೋಲಿಸಿ ನನ್ನನ್ನು ರಾಜಕೀಯವಾಗಿ ಮುಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಕಾರ್ಕಳದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನಾನು ಮಂಡ್ಯಕ್ಕೆ ಹೋಗಿ ಆರು ದಿನಗಳಾಗಿವೆ. ಜೆಡಿಎಸ್‌ ಮಂಡ್ಯದಲ್ಲಿ ಯಾವ ಕುತಂತ್ರ ಮಾಡುತ್ತಿಲ್ಲ. ಕುತಂತ್ರ ಮಾಡುತ್ತಿರುವವರು ಯಾರು ಎಂದು ಗೊತ್ತಿದೆ. ಮಂಡ್ಯ ನಮ್ಮ ಹೃದಯವಿದ್ದಂತೆ, ಅಲ್ಲಿನವರ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ. ಯಾರ ಡ್ರಾಮಾ ಕೂಡ ನಡೆಯುವುದಿಲ್ಲ’ ಎಂದರು.

ರೈತರು ಸತ್ತಾಗ ಯಾರೂ ಬಂದಿಲ್ಲ. ಕಾಂಪೌಂಡ್ ಕಟ್ಟಿದರೆ ಅದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ ಎಂದು ಸುಮಲತಾಗೆ ಅವರು ಟಾಂಗ್ ನೀಡಿದರು. ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ. ಅಲ್ಲಿ ಹಿನ್ನಡೆಯಾಗಲು ಬಿಡುವುದಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !