ಸೋಮವಾರ, ನವೆಂಬರ್ 18, 2019
24 °C

ಹಾಸನಾಂಬ ವೆಬ್‌ಸೈಟ್‌ಗೆ ಚಾಲನೆ

Published:
Updated:
Prajavani

ಹಾಸನ: ಹಾಸನಾಂಬ ದೇವಿಯ ಜಾತ್ರೋತ್ಸವದ ನಿಮಿತ್ತ ಹಾಸನಾಂಬ ಡಾಟ್‌ ಕಾಂ (www.srihasanamba.com) ಎಂಬ ವೆಬ್‍ಸೈಟ್ ಆರಂಭಿಸಲಾಗಿದೆ.

ವೆಬ್‍ಸೈಟ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳು ಲಭ್ಯವಿವೆ. ಜಿಲ್ಲೆಯಲ್ಲಿನ ಕುದುರೆ ಗುಂಡಿ ಶಾಸನ, ದೇವಾಲಯದ ಇತಿಹಾಸ, ಹಾಸನಾಂಬ ದೇವಿ ದರ್ಶನದ ಟಿಕೆಟ್ ಲಭ್ಯತೆ, 13 ದಿನಗಳ ದರ್ಶನದ ವೇಳಾಪಟ್ಟಿ, ಪ್ರಸಾದ ವ್ಯವಸ್ಥೆ ಹಾಗೂ ಹಾಸನ ಜಿಲ್ಲೆಯ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್ ತಿಳಿಸಿದರು.

ಪ್ರತಿಕ್ರಿಯಿಸಿ (+)