ಬುಧವಾರ, ಆಗಸ್ಟ್ 21, 2019
22 °C

ಶಿರಸಿ: ಎಡೆಬಿಡದೇ ಸುರಿಯುತ್ತಿರುವ ಮಳೆ

Published:
Updated:

ಶಿರಸಿ: ತಾಲ್ಲೂಕಿನಲ್ಲಿ ಎರಡು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದೆ. ಸೋಮವಾರ ಬೆಳಗಿನಿಂದ ಮಳೆ ಇನ್ನಷ್ಟು ಜೋರಾಗಿದೆ.

ಮಳೆಯ ಅಬ್ಬರಕ್ಕೆ ಇಲ್ಲಿನ ಮಾರಿಕಾಂಬಾ ದೇವಾಲಯದ ಪಕ್ಕದಲ್ಲಿದ್ದ ಧರ್ಮಛತ್ರದ ಹಳೆಯ ಗೋಡೆ ಕುಸಿದು, ಅಲ್ಲಿಯೇ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ನಾಗರಾಜ ಪೂಜಾರ್ ಎಂಬುವವರಿಗೆ ಸೇರಿದ‌ ಕಾರು ಇದಾಗಿದೆ. ಘಟನೆಯಲ್ಲಿ ಸುವರ್ಣಾ ಪೂಜಾರ್ ಎಂಬ ವೃದ್ಧೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗ್ರಾಮೀಣ‌ ಪ್ರದೇಶದ ಹಳ್ಳಗಳು ತುಂಬಿ ಹರಿಯುತ್ತಿವೆ. ಈ ವರ್ಷ ಮೊದಲ ಬಾರಿಗೆ ಸರಕುಳಿ ಹೊಳೆ ತುಂಬಿ ಹರಿಯುತ್ತಿದ್ದು, ನೀರಿನ ಪ್ರಮಾಣ ಕೊಂಚ ಏರಿಕೆಯಾದರೂ ರಸ್ತೆಯ ಮೇಲೆ ಉಕ್ಕಿ ಹರಿಯುತ್ತದೆ.  ಧಾರಾಕಾರ‌ ಮಳೆಯಲ್ಲೂ ಜನರು ಹೊಳೆ ತುಂಬಿರುವ ಸಂಭ್ರಮವನ್ನು ನೋಡಲು ಬರುತ್ತಿದ್ದಾರೆ.

Post Comments (+)